Kannada NewsKarnataka News

*ಬೆಳಗಾವಿ ಪೊಲೀಸರ ಭರ್ಜರಿ ಭೇಟೆ*

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:

ಕಳೆದ 1 ವರ್ಷದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ನಡೆದ ಒಟ್ಟು 201 ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಬೆಳಗಾವಿ ಪೊಲೀಸರು 324 ಆರೋಪಿಗಳನ್ನು ಬಂಧಿಸಿದ್ದಾರೆ.

201 ಪ್ರಕರಣಗಳಿಂದ ಒಟ್ಟು 17.54 ಕೋಟಿ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಆಭರಣಗಳನ್ನು ಅವುಗಳ ಮಾಲೀಕರಿಗೆ ಮರಳಿಸಲಾಗಿದೆ ಎಂದು ಉತ್ತರ ವಲಯ ಐಜಿಪಿ ಸತೀಶ ಕುಮಾರ ಹೇಳಿದರು.

ಬೆಳಗಾವಿಯ ಡಿಆರ್ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಳುವು ಮಾಲು ಪ್ರದರ್ಶನ ಮತ್ತು ಮಾಲೀಕರಿಗೆ ವಾಪಸ್ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು.

Home add -Advt

 

ವಶಪಡಿಸಿಕೊಂಡ ಸಾಮಗ್ರಿಗಳ ಪೈಕಿ 4.18 ಕೋಟಿ ಮೌಲ್ಯದ 8.369 ಕೆಜಿ ಬಂಗಾರದ ಆಭರಣಗಳು, 4.91 ಲಕ್ಷ ಮೌಲ್ಯದ ಒಟ್ಟು 7 ಕೆಜಿ ಬೆಳ್ಳಿ, 1.24 ಮೋಟಿ ರು. ಮೌಲ್ಯದ ವಾಹನಗಳು, 7.47 ಕೋಟಿ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಎಸ್‍ಪಿ ಡಾ. ಸಂಜೀವ ಪಾಟೀಲ್ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

 

*ಬೆಂಗಳೂರು ಡ್ರಗ್ಸ್ ಪ್ರಕರಣ; ಬಾಲಿವುಡ್ ನಟಿ, ಶಾಸಕರಿಗೆ ED ನೊಟೀಸ್ ಜಾರಿ*

https://pragati.taskdun.com/bangalore-drugs-caserakul-preeth-singhmla-rohith-reddyed-notice/

*ಹೆಜ್ಜೇನು ದಾಳಿ ತಪ್ಪಿಸಿಕೊಳ್ಳಲು ನೀರಿಗೆ ಧುಮುಕಿದ ವ್ಯಕ್ತಿ ಸಮುದ್ರಪಾಲು*

https://pragati.taskdun.com/bee-attackman-deathudupi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button