ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬಾಡಿಗೆಗೆಂದು ಕಾರ್‌ಗಳನ್ನು ಮೋಸತನದಿಂದ ಪಡೆದುಕೊಂಡು ಮಾರಾಟ ಮಾಡುತ್ತಿದ್ದ ಜಾಲ ಪತ್ತೆ ಮಾಡಿರುವ ಬೆಳಗಾವಿ ಉದ್ಯಮಬಾಗ ಪೊಲೀಸ್‌ರು ಓರ್ವನ್ನು ಬಂಧಿಸಿ, 49.50 ಲಕ್ಷ ರೂ. ಮೌಲ್ಯದ 9 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಣಿ ಚನ್ನಮ್ಮ ನಗರದ ಮಂಜುನಾಥ ಚಂಬಣ್ಣ ಆಲಕಟ್ಟಿ ನೀಡಿದ ದೂರಿನಂತೆ ಬಾಡಿಗೆಗೆ ಪಡೆದ ಕಾರನ್ನು ಮರಳಿಸದೇ ಮೋಸ ಮಾಡಿದ ಬಗ್ಗೆ ಉದ್ಯಮಬಾಗ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಶಿವಕುಮಾರ ಮಲ್ಲೇಶಪ್ಪ ಮಾಳಕನ್ನವರ, (ವಯಸ್ಸು-೨೨ ವರ್ಷ, ಸಾ: ರಾಮತೀರ್ಥ ನಗರ, ಬೆಳಗಾವಿ) ಇವನು ತಾನು ಬಾಲಾಜಿ ಎಂಟರ್‌ಪ್ರೈಸೆಸ್ ಎಂಬ ಫರ್ಮ್ ಮಾಲೀಕನಿದ್ದು, ದೊಡ್ಡ ದೊಡ್ಡ ಕಂಪನಿಗಳಿಗೆ ಕಾರುಗಳನ್ನು ಬಾಡಿಗೆ ಹಚ್ಚುವುದಾಗಿ ಸುಳ್ಳು ಹೇಳಿ ನಂಬಿಸಿ, ಪೊರ್ಡ ಪಿಯಸ್ಟೋ ಕಾರ್ (ನಂ, ಕೆಎ-೨೨/ಝೆಡ್-೨೪೮೯) ತೆಗೆದುಕೊಂಡು ಆ ಕಾರನ್ನು ಮಾರಾಟ ಮಾಡಲು ಬೇರೆಯವರ ಬಳಿ ಇಟ್ಟು ಹಣ ಪಡೆದುಕೊಂಡಿದ್ದ.
ಶಿವಕುಮಾರ ಮಲ್ಲೇಶಪ್ಪ ಮಾಳಕನ್ನವರನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಇವನು 7 ಕಾರುಗಳನ್ನು ಬೆಳಗಾವಿ, ಧಾರವಾಡ ನಗರಗಳಲ್ಲಿ ಹಾಗೂ ಇನ್ನೊಬ್ಬ ಆರೋಪಿ ಸಂಜಯ ಕುಲಕರ್ಣಿ ಎಂಬುವವನೊಂದಿಗೆ ಸೇರಿ ಬೆಂಗಳೂರು ನಗರದಲ್ಲಿ ೦೨ ಕಾರುಗಳನ್ನು ಮಾರಾಟ ಮಾಡಿದ್ದು ಒಟ್ಟು 49.50 ಲಕ್ಷ ಮೌಲ್ಯದ ಒಟ್ಟು 9 ಕಾರ್‌ಗಳನ್ನು ಮಾಲೀಕರಿಗೆ ಬಾಡಿಗೆಗಾಗಿ ಬಳಸುವುದಾಗಿ ಸುಳ್ಳು ಹೇಳಿ ಅವರಿಂದ ಪಡೆದುಕೊಂಡು ಅವರಿಗೆ ಬಾಡಿಗೆಯನ್ನೂ ನೀಡದೇ, ಮರಳಿ ವಾಹನವನ್ನು ನೀಡದೇ ಬೇರೆಯವರಿಗೆ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಶಿವಕುಮಾರ ಮಲ್ಲೇಶಪ್ಪ ಮಾಳಕನ್ನವರನಿಂದ ಎಲ್ಲ 9 ಕಾರ್‌ಗಳನ್ನು ಉದ್ಯಮಬಾಗ ಪೊಲೀಸ್‌ರು ತನಿಖೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ಸಂಜಯ ಕುಲಕರ್ಣಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ.
ಉದ್ಯಮಬಾಗ ಇನಸ್ಪೆಕ್ಟರ್ ಹಾಗೂ ಅವರ ತಂಡದ ಈ ಕಾರ್ಯವನ್ನು ಪೊಲೀಸ್ ಆಯುಕ್ತರು, ಹಾಗೂ ಡಿಸಿಪಿ(ಕಾ&ಸು), ಡಿಸಿಪಿ (ಅ&ಸಂ) ಹಾಗೂ ಎಸಿಪಿ ಖಡೇಬಜಾರ ಶ್ಲಾಘಿಸಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ pragativahini.com ನೋಡಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ