National

*ಭಿಕ್ಷುಕಿ ಮನೆಯಲ್ಲಿ ಪತ್ತೆಯಾಯ್ತು ಬೈಕ್, 12 ಮೊಬೈಲ್ ಫೋನ್, ಭಾರಿ ಚಿನ್ನಾಭರಣ*

ಪ್ರಗತಿವಾಹಿನಿ ಸುದ್ದಿ: ಭಿಕ್ಷುಕಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಬೈಕ್, ರಾಶಿ ರಾಶಿ ಮೊಬೈಲ್, ಭಾರಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಬಿಹಾರದ ಮುಜಫರ್ ಪುರ ಜಿಲ್ಲೆಯ ನೀಲಂ ದೇವಿ ಎಂಬ ಭಿಕ್ಷುಕಿ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 1 ಲಕ್ಷಕ್ಕೂ ಅಧಿಕ ಮೌಲ್ಯದ ಕೆಟಿಎಂ ಬೈಕ್, 12 ಫೋನ್ ಗಳು, ವಿವಿಧ ದೇಶಗಳ ಬೆಳ್ಳಿ ನಾಣ್ಯಗಳು, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ನೀಲಂ ದೇವಿ ಭಿಕ್ಷೆ ಬೇಡುತ್ತಾ ಕಳ್ಳತನಕ್ಕೆ ಸೂಕ್ತವಾದ ಮನೆಗಳನ್ನು ಆಯ್ಕೆ ಮಾಡುತ್ತಿದ್ದಳು. ಬಳಿಕ ಆಕೆಯ ಅಳಿಯ ಕಳ್ಳತನ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Home add -Advt

Related Articles

Back to top button