ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಮಾರ್ಗವಾಗಿ ಪುಣೆ-ಹುಬ್ಬಳ್ಳಿ ವಂದೇ ಭಾರತ ರೈಲು ಸೇವೆ ಆರಂಭವಾಗಿದ್ದು ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಇದೇ ವೇಳೆ ಪುಣೆಯಿಂದ ವಂದೇ ಭಾರತ ರೈಲು ಬೆಳಗಾವಿಗೆ ಬರ್ತಿದ್ದಂತೆ ಸಿಳ್ಳೆ, ಕೇಕೆ, ಚಪ್ಪಾಳೆ ತಟ್ಟಿ ಕುಂದಾನಗರಿ ಬೆಳಗಾವಿ ಜನತೆ ಅದ್ಧೂರಿಯಾಗಿ ಸ್ವಾಗತಿಸಿಕೊಂಡರು. ಜೈ ಶ್ರೀರಾಮ, ಜೈ ಮೋದಿ ಎಂದು ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರ ಸಂಭ್ರಮಿಸಿದರು.
ರೈಲು ಬೆಳಗಾವಿಗೆ ಬರ್ತಿದ್ದಂತೆ ರೈಲ್ವೆ ಸಚಿವ ವಿ. ಸೋಮಣ್ಣ ಸಂಸದರಾದ ಜಗದೀಶ್ ಶೆಟ್ಟರ್, ಈರಣ್ಣ ಕಡಾಡಿ, ಮಾಜಿ ಸಂಸದೆ ಮಂಗಲ ಅಂಗಡಿ ಸ್ವಾಗತಿಸಿದರು. ಬಳಿಕ ವಂದೇ ಭಾರತ ರೈಲನ್ನು ಸಚಿವ ವಿ.ಸೋಮಣ್ಣ ಹುಬ್ಬಳ್ಳಿಗೆ ಬೀಳ್ಕೊಟ್ಟರು. ಇದೇ ರೈಲಿನ ಲೋಕೋಪೈಲೇಟ್ ಪಕ್ಕದ ಸೀಟ್‌ಲ್ಲಿ ಕುಳಿತು ಹುಬ್ಬಳ್ಳಿಗೆ ಸಂಸದ ಶೆಟ್ಟರ್ ಪ್ರಯಾಣ ಬೆಳೆಸಿದರು. ರೈಲು ಪುಣೆಯಿಂದ ಹುಬ್ಬಳ್ಳಿಗೆ, ಹುಬ್ಬಳ್ಳಿಯಿಂದ ಪುಣೆಗೆ ವಾರದಲ್ಲಿ ಮೂರು ದಿನ ಸಂಚಾರ ಮಾಡಲಿದೆ. ಪ್ರತಿ ಗುರುವಾರ, ಶನಿವಾರ, ಸೋಮವಾರ ಮಧ್ಯಾಹ್ನ 2.15 ಕ್ಕೆ ಹೊರಟು ರಾತ್ರಿ 10.45 ಕ್ಕೆ ಹುಬ್ಬಳ್ಳಿಗೆ ಬರಲಿದ್ದು ಬುಧವಾರ, ಶುಕ್ರವಾರ, ಭಾನುವಾರ ಹುಬ್ಬಳ್ಳಿಯಿಂದ ಬೆಳಗ್ಗೆ 5 ಕ್ಕೆ ಹೊರಟು ಮಧ್ಯಾಹ್ನ 1.30ಕ್ಕೆ ಪುಣೆಗೆ ಆಗಮಿಸಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ