ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿರೋಧದ ನಡುವೆಯೂ ರಾಜ್ಯ ಸರ್ಕಾರ ಮತಾಂತರ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಸರ್ಕಾರ ಕ್ರಮಕ್ಕೆ ವಿಪಕ್ಷಗಳು ಕಿಡಿಕಾರಿವೆ.
ಮಧ್ಯಾಹ್ನದ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ, ವಿಧಾನಸಭೆಯಲ್ಲಿ ಏಕಾಏಕಿ ಮತಾಂತರ ನಿಷೇಧ ವಿಧೇಕಯ ಮಂಡಿಸಿದ್ದಾರೆ. ತರಾರುತಿಯಲ್ಲಿ ವಿಧೇಯಕ ಮಂದಿಸಿದ ಕ್ರಮಕ್ಕೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ರಾಜ್ಯ ಸರ್ಕಾರ ಕದ್ದುಮುಚ್ಚಿ ಮಸೂದೆ ಮಂಡನೆ ಮಾಡುತ್ತಿರುವುದರ ಅರ್ಥವೇನು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮಾತಿಗೆ ಗರಂ ಆದ ಸ್ಪೀಕರ್ ಕಾಗೇರಿ ‘ಕದ್ದುಮುಚ್ಚಿ’ ಎಂಬ ಪದ ಬಳಕೆ ವಾಪಸ್ ಪಡೆಯಿರಿ ಎಂದು ಸೂಚಿಸಿದ್ದಾರೆ. ಅಲ್ಲದೇ ಮತಾಂತರ ನಿಷೇಧ ವಿಧೇಯಕವಷ್ಟೇ ಮಂಡಿಸಲಾಗಿದೆ. ಈ ಬಗ್ಗೆ ಚರ್ಚೆಗೆ ನಾಳೆ ಸದನದಲ್ಲಿ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಇದಕ್ಕೆ ಕಿಡಿಕಾರಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಜನವಿರೋಧಿ ಮಸೂದೆಯೊಂದನ್ನು ದಿಢೀರ್ ಆಗಿ ಮಂಡಿಸುತ್ತಿರುವುದು ಸರಿಯಲ್ಲ, ಮಸೂದೆ ಕುರಿತ ಪ್ರತಿ ಕೂಡ ನೀಡಲಾಗಿಲ್ಲ. ಚರ್ಚೆಗೆ ಅವಕಾಶವನ್ನೂ ನೀಡದೇ ತರಾತುರಿಯಲ್ಲಿ ಮಸೂದೆ ಮಂಡಿಸುತ್ತಿರುವ ಕ್ರಮಕ್ಕೆ ನಮ್ಮ ವಿರೋಧವಿದೆ. ಮತಾಂತರ ನಿಷೇಧ ಕಾಯ್ದೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ನಿಯಮಾವಳಿಗಳ ಪುಸ್ತಕ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಮಸೂದೆಗೆ ನಮ್ಮ ವಿರೋಧವಿದೆ. ಇಂತಹ ಕಾಯ್ದೆ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಸದನದಲ್ಲಿ ವಿಪಕ್ಷ ಸದಸ್ಯರು ಗದ್ದಲವೆಬ್ಬಿಸಿದ್ದಾರೆ. ಆಡಳಿತ ಪಕ್ಷ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ಆರಂಭವಾದ ಪ್ರಸಂಗ ನಡೆದಿದೆ.
ಮತಾಂತರ ನಿಷೇಧ ಕಾಯ್ದೆ ಬೆಂಬಲಿಸಿ; ಬಿಎಸ್ ವೈ ಮನವಿ
ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ: ಸಚಿವ ಎಂಟಿಬಿ ನಾಗರಾಜು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ