*ವಿವಿಧ ಸಂಘಟನೆಗಳ ಸಮಸ್ಯೆ ಆಲಿಸಿದ ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ತಮ್ಮ ಬೇಡಿಕೆ ಈಡೆರಿಸುವಂತೆ ಆಗ್ರಹಿಸಿ ಬೆಳಗಾವಿ ಸುವರ್ಣಸೌಧ ಬಳಿ ಇರುವ ಸುವರ್ಣ ಟೆಂಟ್‌ಗೆ ಆಗಮಿಸಿದ ವಿವಿಧ ಸಂಘಟನೆಗಳ ಸದಸ್ಯರು ಇಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಇಂದು ಚಳಿಗಾಲ ಅಧಿವೇಶನ 8 ದಿನಕ್ಕೆ ಕಾಲಿಟ್ಟಿದ್ದು, ಸುವರ್ಣಸೌಧದ ಎದುರಿನಲ್ಲಿರುವ ಸುವರ್ಣ ಟೆಂಟ್ ನಲ್ಲಿ ಬುಧವಾರ ಒಟ್ಟು 14 ವಿವಿಧ ಸಂಘಟನೆಗಳ ಸದಸ್ಯರು ತಮ್ಮ ಬೇಡಿಕೆ ಈಡೆರಿಸುವಂತೆ ಪ್ರತಿಭಟನೆ ನಡೆಸಿದರು. ಅಲ್ಲದೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ತಮ್ಮ ಮನವಿ ಸಲ್ಲಿಸಿ ತಮ್ಮಲಿರುವ ಸಮಸ್ಯೆಗಳನ್ನು ತೋಡಿಕೊಂಡರು.
ಸೌಧದ ಎದುರು ಪ್ರತಿಧ್ವನಿಸಿದ ಪ್ರತಿಭಟನೆಗಳು ಎರಡು ದಿನಗಳ ರಜೆ, ಸೋಮವಾರ ಹಿರಿಯ ಶಾಸಕ ಶಾಮನೂರು ಶಿವಶಮಕರಪ್ಪನವರ ನಿಧನದ ಹಿನ್ನಲೆಯಲ್ಲಿ ಮುಂದೂಡಲ್ಪಿಟ್ಟಿದ್ದ ಅಧಿವೇಶನ ಮತ್ತೆ ಪ್ರಾರಂಭವಾಗುತ್ತಿದ್ದಂತೆ ಸುವರ್ಣಸೌಧದ ಎದುರಿನ ಸುವರ್ಣಟೆಂಟ್ನಲ್ಲಿ ಸಾಲು ಸಾಲು ವಿವಿಧ ಸಂಘಟನೆಗಳು ಪ್ರತಿಧ್ವನಿಸಿದವು. ಅಲ್ಲದೇ ಸಾಮಾನ್ಯವಾಗಿ ಅಧಿವೇಶನ ನಡೆಯುವ ಸಮಯದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ತಮ್ಮ ಬೇಡಿಕೆ ಮುಟ್ಟಿಸಿದರೆ ಸರ್ಕಾರದ ಮಟ್ಟದಲಾದರೂ ಚರ್ಚೆಗೆ ಬರಬಹುದು ಎಂಬ ನಂಬಿಕೆಯಿಂದ ರಾಜ್ಯ ವಿವಿಧ ಸಂಘಟನೆಗಳು ಇಂದು ಸುವರ್ಣ ಟೆಂಟ್ ಗೆ ಕಾಲಿರಿಸಿದವು .
ಇಂದು ಸುವರ್ಣ ಟೆಂಟ್‌ಗೆ ಕಾಲಿಟ್ಟ 14 ಸಂಘಟನೆಗಳು: ಕರ್ನಾಟಕ ರಾಜ್ಯ ಭೋವಿ ವಡ್ಡರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ಪೌರಸೇವಾ ಬೀದಿ ದೀಪ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಪಟ್ಟಣ ಪಂಚಾಯ್ತಿ/ ಪುರಸಭೆ /ನಗರ ಸಭೆ/ ಬಿಬಿಎಂಪಿ ಗ್ರಂಥಾಲಯ ಮೇಲ್ವಿಚಾರಕರ ಸಂಘ, ರಾಯಬಾಗದ ಮಹರ್ಷಿ ವಾಲ್ಮಿಕಿ ತಳವಾರ ಪರಿಶಿಷ್ಟ ಪಂಗಡ ಸಮಾಜ ಸೇವಾ ಸಂಘ, ಶರಾವತಿ ಪಂಪ ಸ್ಟೋರೆಜ್ ಯೋಜನೆ ಕೈ ಬಿಡಲು ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆರ ಮಂಜೂರು ಹೋರಾಟ ಸಮಿತಿ, ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ, ರಾಷ್ಟ್ರೀಯ ಗೋರ್ (ಬಂಜಾರ)ಮಳಾವ-ಕರ್ನಾಟಕ(ರಿ), ಕರ್ನಾಟಕ ಬಂಜಾರ (ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ(ರಿ), ಕರ್ನಾಟಕ ರಾಜ್ಯ ಗ್ರಾಮೀಣ ಪ್ರಥಮ ಚಿಕಿತ್ಸಾ ವೈದ್ಯರ ಸಂಘ (ರಿ) ಜವಳಿ ಬಜಾರ, ಮಹಾಲಿಂಗಪುರ, ಕರ್ನಾಟಕ ಸಮತಾ ಸೈನಿಕ ದಳ, ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ (ರಿ), ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘ ಮಹಾಲಿಂಗಪೂರ, ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್, ಬೆಳಗಾವಿಯ ಗೃಹ ಕಾರ್ಮಿಕರ ಹಕ್ಕಿನ ಒಕ್ಕೂಟ . ಕರ್ನಾಟಕ ಶುಗರ ವರ್ಕರ್ಸ್ ಫೆಡರೇಷನ್ (ರಿ), ಬೆಳಗಾವಿಯ ಸುನ್ನಿ ಮುಸ್ಲೀಂ ಜಮಾತ , ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಕರ್ನಾಟಕ ರಾಜ್ಯ ಸಮಿತಿ ಸೇರಿದಂತೆ ಇಂದು ಒಟ್ಟು 14 ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು
ಶಾಂತ ಚಿತ್ ದಿಂದ ಸಮಸ್ಯೆ ಆಲಿಸಿದ ಸಚಿವ ಸತೀಶ್ ಜಾರಕಿಹೊಳಿ: ಒಂಡೆದೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವಿವಿಧ ಸಂಘಟನೆಗಳು ಮುಂದಾದರೆ, ಅದೇ ಟೆಂಟ್ ಗಳ ಸ್ಥಳಕ್ಕೆ ಖುದ್ದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೋಗಿ ಅವರ ಮನವಿ ಸ್ವೀಕರಿಸಿ ಅವರ ಸಮಸ್ಯೆಗಳನ್ನು ಶಾಂತ ಚಿತ್ತ್ ದಿಂದ ಅವರೊಂದಿಗೆ ಕುಳಿತು ಆಲಿಸಿ ಅವರ ಬೇಡಿಕೆ ಈಡೆರಿಸುವ ಭರವಸೆ ನೀಡಿದರು. ಅಲ್ಲದೇ ನಿಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದಿರಿಸಲಾಗುವುದು. ನಾವು ಪ್ರಾಮಾಣಿಕವಾಗಿ ನಿಮ್ಮ ಬೇಡಿಕೆಗಳಿಗೆ ಈಡೆರಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಚಿವ ಸತೀಶ್ ಜಾರಕಿಹೊಳಿ ಮುಂದೆ ಮುಂದಿನ ಸಿಎಂ ಘೋಷಣೆ: ಬುಧವಾರ ಸುವರ್ಣ ಟೆಂಟನಲ್ಲಿ ನಡೆಸುತ್ತಿರುವ ಅಖಿಲ ಕರ್ನಾಟಕ ಅನುದಾನಿ ಶಾಲಾ ಕಾಲೇಜುಗಳ ನೌಕರರ ಸಂಘದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ನೋಡಿದ ಸಂಘದ ಸದಸ್ಯರು ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿಗೆ ಜೈ ಎಂದು ಘೋಷಣೆ ಕೂಗಿದರು. ಪ್ರತಿಭಟನಾ ಟೆಂಟ್ ನಲ್ಲಿದ್ದ ಎಲ್ಲರೂ ಸತೀಶ್ ಜಾರಕಿಹೊಳಿ ಗೆ ಜೈ ಎನ್ನುವ ದೃಶ್ಯಗಳು ಎಲ್ಲಡೆ ಕಂಡು ಬಂದವು.




