Kannada NewsKarnataka News

ಬೆಳಗಾವಿ : ಅಪಘಾತದಲ್ಲಿ ಶಿಕ್ಷಕ ನಿಧನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  : 

ಬೆಳಗಾವಿ ತಾಲೂಕಿನ ವೀರಪ್ಪನಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ರುದ್ರಪ್ಪ ಚಿನ್ನಪ್ಪ  ಗಿರೆಪ್ಪನವರ (55 ವಯಸ್ಸು ) ಶುಕ್ರವಾರ ಸಂಜೆ ಹಿರೇಬಾಗೇವಾಡಿಯ ಪ್ರವಾಸಿ ಮಂದಿರ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಟ್ಯಾಂಕರ ಹಾಯ್ದ ಪರಿಣಾಮ  ಅಪಘಾತದಲ್ಲಿ ನಿಧನ ರಾದರು.

ಬೈಕ್ ಮೂಲಕ ಬೆಳಗಾವಿಯಿಂದ ಹಿರೇಬಾಗೇವಾಡಿಗೆ ಬರುವಾಗ ಈ ಅಪಘಾತ ಜರುಗಿದೆ, ಬೈಕ್ ಹಿಂದುಗಡೆ ಕುಳಿತಿದ್ದ ಅವರ ಪತ್ನಿಗೆ ಅಲ್ಪಸ್ವಲ್ಪ ಗಾಯವಾಗಿದ್ದು ಪ್ರಣಾಪಾಯದಿಂದ ಪಾರಾಗಿದ್ದಾರೆ

ಹಿರೇಬಾಗೇವಾಡಿ ಗ್ರಾಮದ ನಿವಾಸಿಯಾಗಿದ್ದ ಗಿರೆಣ್ಣವರ ಅವರು ಸರಳ ಸಜ್ಜನಿಕೆಯ, ಆದರ್ಶ ಶಿಕ್ಷಕರಾಗಿದ್ದರು, ಶಾಲೆಯ ಮಕ್ಕಳ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು, ಬೆಳಗಾವಿ ತಾಲೂಕಿನ ಶಿಕ್ಷಕರ ಹಾಗೂ ಇಲಾಖೆಯ ಅಧಿಕಾರಿಗಳ ಪ್ರೀತಿ ಗಳಿಸಿದ್ದರು.

Home add -Advt

ಮೃತರು ತಮ್ಮ ಹಿಂದೆ ಧರ್ಮಪತ್ನಿ, ಓರ್ವ ಸುಪುತ್ರ, ಓರ್ವ ಸುಪುತ್ರಿ, ಇಬ್ಬರು ಸಹೋದರರು ಸೇರಿದಂತೆ ಅಪಾರ ಬಂಧು ಬಳಗ ಸಂಬಂಧಿಕರನ್ನು ಬಿಟ್ಟು ಅಗಲಿದ್ದಾರೆ

ಸಂತಾಪ :- ಕಾಲೇಜಿನ ಸಹಪಾಠಿಯಾಗಿದ್ದ, ಸರಳ ಸಜ್ಜನಿಕೆಯ, ಸ್ನೇಹ ಜೀವಿಯಾಗಿದ್ದ ಶಿಕ್ಷಕರಾದ ಆರ್ ಸಿ ಗಿರೆಣ್ಣವರ ಅಕಾಲಿಕ ನಿಧನಕ್ಕೆ ತಾಲೂಕಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘ ಶೋಕ ವ್ಯಕ್ತ ಪಡಿಸಿದೆ.

ಸಾರ್ವಜನಿಕರ ಮನೆ ಬಾಗಿಲಿಗೆ “ಸಂಚಾರಿ ಪಶು ಚಿಕಿತ್ಸಾ ಘಟಕ” -ಜುಲೈ ೧೯ ರಂದು ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button