Belagavi NewsBelgaum NewsKarnataka News
*ಬೆಳಗಾವಿಯಲ್ಲಿ ಕಳ್ಳತನ ಪ್ರಕರಣ: 8, 30,00 ಮೌಲ್ಯದ ವಸ್ತುಗಳು ಜಪ್ತಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕಳ್ಳತನ ಪ್ರಕರಣ ಸಂಬಂಧ ಪೊಲೀಸರು 8,30,000 ಹಣ ಜಪ್ತಿ ಮಾಡಿದ್ದಾರೆ.
ಟಿಳಕವಾಡಿಯ ಒಂದು ಮನೆ ಹಾಗೂ ಲಾಡ್ಜ್ ವೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಕೇಸ್ ದಾಖಲಾಗಿತ್ತು. ಇದೀಗ ಪ್ರಕರಣದಲ್ಲಿ 5, 70,000 ರೂ ಚಿನ್ನಾಭರಣ, 2,50,000 ರೂ ಮೌಲ್ಯದ ಯಮಹಾ ಆರ್ 15 ಬೈಕ್, 10,000ರೂ ಮೌಲ್ಯದ ಕಪ್ಪು ಬಣ್ಣದ ಓಪ್ಪೋ ರೆನೋ 7 ಪ್ರೋ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಒಟ್ಟು ಪ್ರಕರಣದಲ್ಲಿ 8,30,000 ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.