
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಂಇಎಸ್ ನಿಷೇಧದ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಎಂಇಎಸ್ ಪುಂಡಾಟಗಳು ಹೆಚ್ಚುತ್ತಿರುವ ಹಿನ್ನೆಯಲ್ಲಿ ಎಂಇಎಸ್ ನಿಷೇಧಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ ವಸತಿ ಸಚಿವ ವಿ.ಸೋಮಣ್ಣ, ಎಂಇಎಸ್ ಆಗಲಿ ಯಾವುದೇ ಸಂಘಟನೆಗಳಾಗಲಿ ನಿಷೇಧಿಸುವ ಚಿಂತನೆಯಿಲ್ಲ. ಅವರೂ ಕೂಡ ನಮ್ಮವರೆ, ಅವರ ಹಕ್ಕನ್ನು ಕೇಳಲಿ. ಆದರೆ ಎಂಇಎಸ್ ಪುಂಡಾಟ ಮಾಡುವುದು ಸರಿಯಲ್ಲ. ಅಧಿವೇಶನ ಮುಗಿದ ಬಳಿಕ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಳಗಾವಿ ಎಂಇಎಸ್ ಕೈತಪ್ಪುತ್ತಿರುವ ಹಿನ್ನೆಲೆಯಲ್ಲಿ ಹೀಗಾಗುತ್ತಿದೆ. ಎಂಇಎಸ್ ಪ್ರಭಾವ ಮುಂಚಿನಂತೆ ಇಲ್ಲ. ಹಿಂದೆ ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್ ನವರು ಇದ್ದರು. ಈಗ ಬಿಜೆಪಿಯವರೂ ಇದ್ದಾರೆ. ಗಲಭೆ ನದೆಸುವುದು, ಪುಂಡಾಟ ಮೆರೆಯುವಂತದ್ದು ಬೇಡ. ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ನಿಷೇಧಾಜ್ಞೆ ವಿಸ್ತರಣೆ