ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಮತ್ತು ಕೆಎಸ್‌ಆರ್ ಬೆಂಗಳೂರು ಇವರ ಸಯುಕ್ತ ಆಶ್ರಯದಲ್ಲಿ ವಿಶೇಷ ಹೊಸ ರೈಲು ಸಂಖ್ಯೆ ೦೬೫೨೬ ರ ಉದ್ಘಾಟನಾ ಸಮಾರಂಭಕ್ಕೆ ಜೂನ್ ೨೯ ರಂದು ನೈರುತ್ಯ ರೈಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರು ಚಾಲನೆ ನೀಡಿದರು.
ಮುಂಬೈ, ಬೆಂಗಳೂರು ಮಾದರಿಯಲ್ಲೇ ಬೆಳಗಾವಿಗೂ ಕನೆಕ್ಟಿವಿಟಿ ಆಗಲಿದೆ. ವಿಶ್ವದೊಂದಿಗೆ ಬೆಳಗಾವಿ ಸಂಪರ್ಕ ಸಾಧ್ಯವಾಗಲಿದೆ ಎಂದು ಸುರೇಶ ಅಂಗಡಿ ಹೇಳಿದರು.
ಬೆಳಗಾವಿ ರಾಜಕಾರಣಿಗಳಲ್ಲೂ ಒಗ್ಗಟ್ಟು ಬರಬೇಕು. ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಬೇಕು. ಮುಂದಿನ ದಿನಗಳಲ್ಲಿ ಬೆಳಗಾವಿ ಎಲ್ಲ ರೀತಿಯಲ್ಲೂ ಅಭಿವೃದ್ಧಿ ಹೊಂದುವಂತೆ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ರೈಲ್ವೆ ಸಭೆಗಳಿಗೆ ಸುವರ್ಣ ವಿಧಾನಸೌಧ ಬಳಕೆ ಮಾಡಲಾಗುವುದು ಎಂದೂ ಅವರು ಹೇಳಿದರು.
ಈ ವಿಶೇ, ರೈಲಿಗೆ ಬೆಳವಡಿ ಮಲ್ಲಮ್ಮನ ಹೆಸರಿಡಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ರಾಜ್ಯ ಸಭಾ ಸದಸ್ಯರಾದ ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಆನಂದ ಮಾಮನಿ ದುರ್ಯೋಧನ ಐಹೋಳೆ, ಅನೀಲ ಬೆನಕೆ, ಲಕ್ಷ್ಮೀ ಹೆಬ್ಬಾಳಕರ, ಗಣೇಶ ಹುಕ್ಕೇರಿ, ರೇಲ್ವೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ