ಮನೆ ಮಗ ಮೃಣಾಲ ಹೆಬ್ಬಾಳಕರ್ ಗೆ ಆರತಿ ಬೆಳಗಿ, ತಿಲಕವಿಟ್ಟು ಹಾರೈಸಿದ ಬೆಳಗಾವಿ ಮಹಿಳೆಯರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಗುರುವಾರ ಸಂಜೆ ಬೆಳಗಾವಿ ನಗರದ ವಿವಿಧ ಭಾಗಗಳಲ್ಲಿ ಮತಯಾಚನೆ ನಡೆಸಿದರು. ಹೊದಲ್ಲೆಲ್ಲ ಮಹಿಳೆಯರು ಮನೆ ಮಗನಿಗೆ ಆರತಿ ಬೆಳಗಿ, ತಿಲಕವಿಟ್ಟು ವಿಜಯೀಭವ ಎಂದು ಹಾರೈಸಿದರು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಿವಾಜಿ ರೋಡ್, ಮುಜಾವರ್ ಗಲ್ಲಿ, ಪಾಟೀಲ ಮಾಳ, ಭಾಂದೂರ್ ಗಲ್ಲಿ, ತಹಶಿಲ್ದಾರ ಗಲ್ಲಿ, ಫುಲಬಾಗ್ ಗಲ್ಲಿ, ಪಾಟೀಲ ಗಲ್ಲಿ, ಮಠ್ ಗಲ್ಲಿ ಹಾಗೂ ಭಾತ್ಕಂಡೆ ಗಲ್ಲಿಗಳಲ್ಲಿ ಮೃಣಾಲ ಹೆಬ್ಬಾಳಕರ್ ಹಾಗೂ ದೊಡ್ಡ ಪ್ರಮಾಣದಲ್ಲಿ ಯುವಕರ ತಂಡ ಪ್ರಚಾರ ಕೈಗೊಂಡು, ಮತ ಯಾಚಿಸಿದರು.
ಎಲ್ಲ ಕಡೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಬರಗಾಲದ ಪರಿಸ್ಥಿತಿಯಲ್ಲಿ ಅನುಷ್ಠಾನಗೊಂಡಿರುವ, ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿಯಂತಹ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರಿಗೆ ವರದಾನವಾಗಿವೆ ಎನ್ನುತ್ತಿದ್ದರು. ಜೊತೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಸಾಧನೆಗಳ ಕುರಿತು ಜನರು ಹಾಡಿಹೊಗಳುತ್ತಿದ್ದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಂತೆಯೇ ಎಲ್ಲ ಕಡೆ ಅಭಿವೃದ್ಧಿ ಕೆಲಸಗಳಾಗಬೇಕು ಎಂದು ಜನರು ಬಯಸುತ್ತಿದ್ದರು. ಈ ಬಾರಿ ಖಂಡಿತ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಬಹುಮತದಿಂದ ಆಯ್ಕೆಯಾಗಲಿದ್ದಾರೆ ಎಂದು ಜನರು ವಿಶ್ವಾಸ ತುಂಬುತ್ತಿದ್ದರು.
`ಸ್ಥಳೀಯ ಅಭ್ಯರ್ಥಿ ಬಿಟ್ಟು ಬೇರೆಯವರಿಗೆ ಮತ ನೀಡಲು ನಮ್ಮ ಮನಸ್ಸು ಒಪ್ಪುವುದಿಲ್ಲ. ಪ್ರತಿಯೊಬ್ಬರಿಗೂ ಸ್ವಾಭಿಮಾನ ಮುಖ್ಯ. ನಾವು ನಮ್ಮೂರ ಅಭ್ಯರ್ಥಿಯನ್ನೇ ಬೆಂಬಲಿಸುತ್ತೇವೆ ಎಂದು ಜನರು ಹೇಳುತ್ತಿದ್ದಾರೆ. ಇದರಿಂದಾಗಿ ನನ್ನ ಉತ್ಸಾಹ, ವಿಶ್ವಾಸ ಇಮ್ಮಡಿಯಾಗಿದೆ ಎಂದು ಮೃಣಾಲ ಪ್ರತಿಕ್ರಿಯಿಸಿದರು.
ಪ್ರಚಾರದಲ್ಲಿ ಆಯಾ ಗಲ್ಲಿಗಳ ನಿವಾಸಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ