GIT add 2024-1
Beereshwara 33

*ಲೋಕಸಭಾ ಚುನಾವಣೆ: ಮತದಾನ ಮಾಡಿದ ಸಿನಿತಾರೆಯರು*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಮತದಾನ ಚುರುಕುಗೊಂಡಿದ್ದು, ರಾಜಕೀಯ ನಾಯಕರು, ಸಿನಿ ತಾರೆಯರು, ಹಿರಿಯ ನಗರಿಕರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಬೆಂಗಳೂರಿನ ವಿವಿಧ ಮತಗಟ್ಟೆಗಳಲ್ಲಿ ಸ್ಯಾಂಡಲ್ ವುಡ್ ನಟ-ನಟಿಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ವರನಟ ಡಾ.ರಾಜ್ ಕುಮಾರ್ ಕುಟುಂಬ ಸದಸ್ಯರು ಸದಾಶಿವನಗರದಲ್ಲಿರುವ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.

Emergency Service

ನಟ ರಾಘವೇಂದ್ರ ರಾಜ್ ಕುಮಾರ್, ಪತ್ನಿ ಹಾಗೂ ಪುತ್ರರಾದ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್, ದಿ.ಪುನೀತ್ ರಾಜ್ ಕುಮರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮತದಾನ ಮಾಡಿದರು.

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ಕತ್ರಿಗುಪ್ಪೆ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮೈಲಹಳ್ಳಿಯಲ್ಲಿ ನಟ ವಿನೋದ್ ರಾಜ್ ಕುಮಾರ್, ಮಂಗಮ್ಮನಪಾಳ್ಯದ ಜಾನ್ಸನ್ ಶಾಲೆಯ ಮತಗಟ್ಟೆಯಲ್ಲಿ ನಟಿ ಪ್ರೇಮಾ, ಗಾನದೀಪಿಕಾ ಶಾಲೆಯ ಮತಗಟ್ಟೆಯಲ್ಲಿ ನಟಿ ರಾಗಿಣಿ ದ್ವಿವೇದಿ, ಆರ್.ಆರ್.ನಗರ ಪತಗಟ್ಟೆಯಲ್ಲಿ ನಟಿ ಅಮೂಲ್ಯ, ರಾಜಾಜಿನಗರ ಮತಗಟ್ಟೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮತದಾನ ಮಾಡಿದರು.

ನಟಿ ಸಪ್ತಮಿ ಗೌಡ ಜೆಪಿನಗರದಲ್ಲಿ, ಚೈತ್ರಾ ಆಚಾರ್ ಬೆಂಗಳೂರಿನ ಕೊಡಿಗೆಹಳ್ಳಿ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಜಯನಗರದಲ್ಲಿ ಮತದಾನ ಮಾಡಿದರು.

Laxmi Tai add
Bottom Add3
Bottom Ad 2