
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮನೆ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ತಗುಲಿ ಬಾಲಕಿ ಸಾವನ್ನಪ್ಪಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ಮಚ್ಚೆ ಗ್ರಾಮದ ಮನೆಯಲ್ಲಿ ನಡೆದಿದೆ.
13 ವರ್ಷದ ಮಧುರಾ ಕೇಶವ್ ಮೋರೆ ಮೃತ ಬಾಲಕಿ. ಖಾನಾಪುರ ತಾಲೂಕಿನ ಮಾಚಿಘಡ ಗ್ರಾಮದ ನಿವಾಸಿ. ಶಾಲೆಗೆ ರಜೆ ಹಿನ್ನೆಲೆಯಲ್ಲಿ ಸೋದರ ಮಾವನ ಮನೆಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ.
ಮನೆ ಮೇಲೆ ಆಟವಾಡುತ್ತಿದ್ದಾಗ ಬಾಲಕಿಗೆ ವಿದ್ಯುತ್ ತಂತಿ ತಗುಲಿ ಬಾಲಕಿ ಸಾವನ್ನಪ್ಪಿದ್ದಾಳೆ. ಹಲವು ಬಾರಿ ಹೆಸ್ಕಾಂ ಗೆ ಹೇಳಿದರು ಅಧಿಕಾರಿಗಳು ವಿದ್ಯುತ್ ತಂತಿ ಸರಿಪಡಿಸಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷಕ್ಕೆ ಬಾಲಕಿ ಮೃತಪಟ್ಟಿದ್ದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ