Kannada NewsKarnataka NewsLatest

ಬೆಳಗಾವಿ: ಇಬ್ಬರು ಆಯುರ್ವೇದ ವೈದ್ಯರಿಗೆ ಜೈಲು

ಅಲೋಪತಿ ಇಂಜೆಕ್ಷನ್ ನೀಡಿ ಮಹಿಳೆ ಸಾವಿಗೆ ಕಾರಣ
 ಪ್ರಗತಿ ವಾಹಿನಿ ಸುದ್ದಿ, ಚಿಕ್ಕೋಡಿ –
 ತಾವು ಅಧ್ಯಯನ ಮಾಡಿದ ಆಯುರ್ವೇದ ಪದ್ಧತಿಯ ಬದಲು ಅಲೋಪತಿ ಚಿಕಿತ್ಸೆ ನೀಡಿ ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಅಥಣಿಯ ಇಬ್ಬರು ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯರಿಗೆ ಚಿಕ್ಕೋಡಿಯ ೭ನೇ ಜಿಲ್ಲಾ ಸತ್ರ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಎಸ್. ಎಲ್. ಚವ್ಹಾಣ ಅವರು ೨.೬ ವರ್ಷ ಜೈಲು ಹಾಗೂ ೫೦ ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.
ಭೀಮಪ್ಪ ಕತ್ತಿ ಹಾಗೂ ರಾಜೇಶ್ವರಿ ಪ್ರಕಾಶ ಕತ್ತಿ ಶಿಕ್ಷೆಗೊಳಗಾದ ಆಯುರ್ವೇದ ವೈದ್ಯರು. ಇವರು ಅಥಣಿಯ ಜೈನಪೇಠೆ ಗಲ್ಲಿಯಲ್ಲಿ ಆಯುರ್ವೇದ ಹಾಗೂ ಹೋಮಿಯೋಪಥಿ ಚಿಕಿತ್ಸೆ ನೀಡುತ್ತಿದ್ದರು.
೨೦೧೦ರ ಅಕ್ಟೋಬರ್ ೨೬ರಂದು ಗೀತಾ ದಿಲೀಪ ಕಬ್ಬೂರ ಎಂಬ ಮಹಿಳೆಯು ಇವರ ಬಳಿ ಹೊಟ್ಟೆ ನೋವಿನ ಚಿಕಿತ್ಸೆಗೆ ದಾಖಲಾಗಿದ್ದಳು. ಆರೋಪಿಗಳು ಅಲೋಪತಿ ಇಂಜೆಕ್ಷನ್ ನೀಡಿದ್ದು ಇದರಿಂದ ಮಹಿಳೆಗೆ ಹೊಟ್ಟೆನೋವು ಹೆಚ್ಚಾಗಿ ಗ್ಯಾಸ್ ಗ್ಯಾಂಗ್ರಿನ್ ಆಗಿತ್ತು. ಬಳಿಕ ಮೂರೇ ದಿನದಲ್ಲಿ ಮಹಿಳೆ ಸಾಂಗ್ಲಿಯ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
 ಆರೋಪಿಗಳ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಅಧಿನಿಯಮದಡಿ ಐಪಿಸಿ ಸೆಕ್ಷನ್  ೩೦೪(೧)ಪ್ರಕಾರ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗಳ ತಪ್ಪು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
https://pragati.taskdun.com/latest/bailahongal-the-husband-who-killed-his-wife-after-slitting-his-throat-came-to-the-police-station-and-surrendered/

Related Articles

Back to top button