*ಬೆಳಗಾವಿ: ಭಾರಿ ಮಳೆಗೆ 15 ಸೇತುವೆಗಳು ಮುಳುಗಡೆ*
ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ 7 ನದಿಗಳು; ಪ್ರವಾಹ ಭೀತಿ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಾರಾಷ್ಟ್ರ, ಪಶ್ಚಿಮ ಘಟ್ಟ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿಯೂ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಪರಿಣಾಮ ಜಿಲ್ಲೆಯಲ್ಲಿನ ಸಪ್ತ ನದಿಗಳು ಅಪಾಯದಮಟ್ಟದಲ್ಲಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.
ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲೆಯ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ತಗ್ಗು ಪ್ರದೇಶಗಳು, ರಸ್ತೆ, ಸೇತುವೆ, ಜಮೀನುಗಳು ನದಿ ನೀರುಪಾಲಾಗಿವೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿವೆ.
ವರುಣಾರ್ಭಟಕ್ಕೆ ಘಟಪ್ರಭಾ, ಮಲಪ್ರಭಾ, ಕೃಷ್ಣಾ, ದೂಧಸಾಗರ, ಹಿರಣ್ಯಕೇಶಿ, ದೂಧ ಗಂಗಾ, ವೇದಗಂಗಾ, ಹಲಾತ್ರಿ ನದಿಗಳು ಉಕ್ಕಿ ಹರಿಯುತ್ತಿದ್ದು, 15 ಸೇತುವೆಗಳು ಮುಳುಗಡೆಯಾಗಿವೆ.
ಭೋಜ್-ಕರಾದಗ, ಭೋಜವಾಡಿ ನಿಪ್ಪಾಣಿ, ಮಲಿಕವಾಡ-ದತ್ತವಾಡ, ಬರ್ವಾದ-ಕುನ್ನೂರು, ಸಿದ್ನಾಳ್-ಅಕ್ಕೋಳ್, ಭೋಜ್-ಕುನ್ನೂರು, ಭೀವಶಿ-ಜತ್ರಾಟ್, ಮಂಜರಿ-ಸೌಂದತ್ತಿ, ಅರ್ಜುನವಾಡಿ-ಕೊಚಾರಿ, ಅರ್ಜುನವಾಡಿ-ಕುರ್ಣಿ, ಮಂಗವತ್ತಿ-ರಾಜಾಪುರ, ಕುರ್ಣಿ-ಕೊಚಾರಿ, ಖಾನಾಪುರ-ಹೆಮ್ಮಡಗಾ,ಶೆಟ್ಟಿಹಳ್ಳಿ-ಮರನಹೋಳ್ ಸೇರಿದಂತೆ 15 ಸೇತುವೆಗಳುಜಲಾವೃತಗೊಂಡಿದೆ.
ಈ ಭಾಗದಲ್ಲಿ ಸಂಚಾರ ಮಾಡದಂತೆ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ರಸ್ತೆ ಬಂದ್ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ