Latest

ಮೂರು ವರ್ಷದ ಮಗುವನ್ನೇ ಕೊಂದ ವೈದ್ಯ?

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮದುವೆಗೆ ಮೊದಲೇ ಹುಟ್ಟಿದ ಮಗುವನ್ನು ಮೂರು ವರ್ಷದ ಬಳಿಕ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದಲ್ಲಿ ನಡೆದಿದೆ.

ಮದ್ವೆಗೆ ಮೊದಲೇ ಹುಟ್ಟಿದ್ದ ಮಗುವನ್ನು ಹುಬ್ಬಳ್ಳಿಯ ಸುವರ್ಣಲತಾ ಗದಿಗೆಪ್ಪಗೌಡರ ಎಂಬವರಿಗೆ ದತ್ತು ನೀಡಲಾಗಿತ್ತು. ಅಂಗವಿಕಲ ಮಗುವನ್ನ ನಕಲಿ ದಾಖಲೆ ಸೃಷ್ಟಿಸಿದ್ದ ಪಾಲಕರು ಚಿಕ್ಕೋಡಿಯ ವೈದ್ಯ ಮಾರುತಿ ಮುಸಾಳೆ ಹಾಗೂ ಅವರ ಪತ್ನಿ ರೇಖಾ ಮುಸಾಳೆ ಮಧ್ಯಸ್ಥಿಕೆಯಲ್ಲಿ ಹುಬ್ಬಳ್ಳಿ ಸುವರ್ಣಲತಾ ಅವರಿಗೆ ದತ್ತು ನೀಡಲಾಗಿತ್ತು. ಈ ವೇಳೆ ಸುವರ್ಣಾರ ಬಳಿ 2 ಲಕ್ಷ ರೂ. ಪಡೆದುಕೊಂಡಿದ್ದರು.

ಮಗು ಅಂಗವಿಕಲ ಎಂದು ತಿಳಿದ ಸುವರ್ಣಾ ಮೂರು ವರ್ಷದ ಕಂದನನ್ನು ವೈದ್ಯ ಮಾರುತಿ ಮಸಾಳೆಗೆ ವಾಪಾಸ್ ನೀಡಿದ್ದಾರೆ. ವೈದ್ಯ ಮಾರುತಿ ಮುಸಾಳೆ ಹಾಗೂ ಮಗುವಿನ ಅಜ್ಜ ರಾಮು ಚೌಗಲೆ ಎಂಬವವರು ಇದೀಗ ಮಗುವನ್ನು ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಘಟನೆ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button