Kannada NewsLatest

ಬೆಳಗಾವಿಯಲ್ಲಿ 4 ತಿಂಗಳ ಗರ್ಭಿಣಿ ಆತ್ಮಹತ್ಯೆ ಪ್ರಕರಣ; ಗಂಡನ ಕರಾಳ ಮುಖ ಬಯಲು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 4 ತಿಂಗಳ ಗರ್ಭಿಣಿ ಆತ್ಮಹತ್ಯೆ ಪ್ರಕರಣದ ಹಿಂದೆ ಗಂಡನ ಕರಾಳ ಮುಖದ ಕೈವಾಡವಿರುವ ಬಗ್ಗೆ ರಹಸ್ಯ ಬಯಲಾಗಿದೆ.

ಬೆಳಗಾವಿಯ ಖಂಜರ್ ಗಲ್ಲಿಯ ನಿವಾಸಿ ಮುಸ್ಕಾನ್ ಎಂಬ ನಾಲ್ಕು ತಿಂಗಳ ಗರ್ಭಿಣಿ ಸೆ.14ರಂದು ಆತ್ಮಹತ್ಯೆಗೆ ಶರಣಾಗಿದ್ದಳು. ಪತಿಯ ವರದಕ್ಷಿಣೆ ಕಿರುಕುಳ, ಚಿತ್ರ ಹಿಂಸೆ ಕಾರಣಕ್ಕೆ ನೊಂದು ಮಗಳು ಸಾವನ್ನಪ್ಪಿರುವುದಾಗಿ ಮುಸ್ಕಾನ್ ಕುಟುಂಬದವರು ಪೊಲಿಸರಿಗೆ ದೂರು ನೀಡಿದ್ದರು. ಇದೀಗ ಆರೋಪಿ ಪತಿ ರೋಹಿಮ್ ನನ್ನು ಪೊಲೀಸರು ಬಂಧಿಸಿದ್ದು, ಆತನ ಕರಾಳ ಮುಖ ಬಯಲಾಗಿದೆ.

8 ತಿಂಗಳ ಹಿಂದಷ್ಟೆ ಬೆಳಗಾವಿಯ ಶಹಾಪುರದ ಅಳವಣ ಗಲ್ಲಿಯ ನಿವಾಸಿ ರೋಹಿಮ್ ಗೆ ಮುಸ್ಕಾನ್ ಳನ್ನು ಮದುವೆ ಮಾಡಿ ಕೊಡಲಾಗಿತ್ತು. ಒಂದು ತಿಂಗಳವರೆಗೆ ಸಭ್ಯನಂತೆ ನಾಟಕವಾಡಿದ್ದ ರೋಹಿಮ್ ತಿಂಗಳ ಬಳಿಕ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಪ್ರತಿದಿನ ಗಾಂಜಾ ಸೇವಿಸಿ ಬಂದು ಹಿಂಸಿಸುತ್ತಿದ್ದ. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಪತ್ನಿ ನಾಲ್ಕು ತಿಂಗಳ ಗರ್ಭಿಣಿ ಎಂಬುದನ್ನು ಲಕ್ಕಿಸದೇ ಚಿತ್ರಹಿಂಸೆ ನೀಡುತ್ತಿದ್ದ. ಅಲ್ಲದೇ ಮುಸ್ಕಾನ್ ಳ ದೂರದ ಸಂಬಂಧಿ ಜೊತೆಯೇ ರೋಹಿಮ್ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ಮುಸ್ಕಾನ್ ಗೆ ಗೊತ್ತಾಗುತ್ತಿದ್ದಂತೆ ಪತಿಯೊಂದಿಗೆ ಜಗಳವಾಡಿದ್ದಾಳೆ. ಅಂದಿನಿದ ಮುಸ್ಕಾನ್ ಮೇಲಿನ ದೌರ್ಜನ್ಯ ಹೆಚ್ಚಾಗತೊಡಗಿದೆ. ಕಿರುಕುಳ ತಾಳಲಾರದೇ ಕೊನೆಗೂ ನೇಣುಬಿಗಿದುಕೊಂಡು ಮುಸ್ಕಾನ್ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

ಅಧಿಕಾರಿಗಳು, ನೌಕರರಿಗೆ ಸರಕಾರದಿಂದ ಗಂಭೀರ ಎಚ್ಚರಿಕೆ; ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರಾಂತಿಕಾರಿ ಸುತ್ತೋಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button