ಪ್ರಗತಿ ವಾಹಿನಿ ಸುದ್ದಿ : ಬೆಳಗಾವಿ; ಬಸ್ಸಿನಲ್ಲಿ ಸಂಚರಿಸುವಾಗ ಕಿಟಕಿಯಿಂದ ಕೈ ಹೊರಗೆ ಹಾಕಿದ ಪರಿಣಾಮ ತುಂಡಾಗಿದ್ದ ಬಾಲಕಿಯ ಕೈನ್ನು 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮರುಜೋಡಣೆ ಮಾಡುವಲ್ಲಿ ವಿಜಯಾ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
ಐದು ವರ್ಷದ ಬಾಲಕಿ ಆಶಾ ಬಸ್ಸಿನಲ್ಲಿ ಸಂಚರಿಸುತ್ತಿರುವ ವೇಳೆ ಮಳೆಯ ನೀರನ್ನು ಕೈಯಲ್ಲಿ ಹಿಡಿಯಲು ಕಿಟಕಿಯಿಂದ ಬಲ ಕೈಯನ್ನು ಹೊರ ಹಾಕಿದ್ದಳು. ಈ ವೇಳೆ
ಎದುರಗಡೆಯಿಂದ ಬರುತ್ತಿರುವ ಇನ್ನೊಂದು ವಾಹನಕ್ಕೆ ಕೈ ಬಡೆದು ತುಂಡಾಗಿ ಹೋಗಿತ್ತು.
ತಕ್ಷಣ ಪ್ರತಿಷ್ಟಿತ (VOTC24x7) ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ರವಾನಿಸಲಾಗಿತ್ತು. ಪ್ಲಾಸ್ಟಿಕ್ ಸರ್ಜನರಾದ ಡಾ. ವಿಜ್ಜಲ ಮಾಲಮಂಡೆ ಪ್ರಥಮ ಚಿಕಿತ್ಸೆ ಹಾಗೂ ಸಂಪೂರ್ಣ ತಪಾಸಣೆ ಮಾಡಿದರು. ಖ್ಯಾತ ವೈದ್ಯರಾದ ಡಾ. ರವಿ ಬಿ ಪಾಟೀಲ ಅವರ ಮಾರ್ಗದರ್ಶನದಲ್ಲಿ ತುಂಡಾದ ಕೈಯನ್ನು ಮರುಜೋಡಣೆಗೆ ನಿರ್ಧರಿಸಿ, ಸುದೀರ್ಘ 10 ಘಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಪ್ಲಾಸ್ಟಿಕ್ ಸರ್ಜನರಾದ ಡಾ ವಿಜ್ಜಲ ಮಾಲಮಂಡೆ, ಡಾ ಶುಭ ದೆಸಾಯಿ ( ಪ್ಲಾಸ್ಟಿಕ್ ಸರ್ಜನ), ಡಾ ಆರದಿಂದ ಹಂಪಣ್ಣವರ (ಚಿಕ್ಕ ಮಕ್ಕಳ
ವಿರುವ ಕಿಳು ತಜ್ಞರು), ಡಾ ಶ್ರೀಧರ ಕಟದಳ ಹಾಗೂ ಶ್ರೀಧರ ಕಲಕೇರಿ ಯವರನ್ನು ಒಳಗೊಂಡ ತಂಡ ತುಂಡಾದ ಕೈಯನ್ನು ಯಶಸ್ವಿಯಾಗಿ ಮರು ಜೋಡಣೆ ಮಾಡಿದೆ ಎಂದು ಡಾ. ರವಿ ಪಾಟೀಲ ಹೇಳಿದ್ದಾರೆ.
ಬಾಲಕಿ ಆಯಾ ಶೇಖ್ ಒಂದು ವಾರದ ಚಿಕಿತ್ಸೆಯ ನಂತರ ಡಿಸ್ಟಾರ್ಜ ಆಗಿದ್ದಳು. ಇದೀಗ ಈ ಶಸ್ತ್ರಚಿಕಿತ್ಸೆ ನಡೆದು ಒಂದು ವರ್ಷವಾಗಿದ್ದು, ಈ ಕುರಿತು ಮಾಹಿತಿ ಹಂಚಿಕೊಂಡಿರುವ ಡಾ. ರವಿ ಪಾಟೀಲ ಬಾಲಕಿಗೆ ಒಂದು ವರ್ಷಗಳ ಸತತ ಮರು ತಪಾಸಣೆ ಹಾಗೂ ಚಿಕಿತ್ಸೆ ಕೊಡಲಾಗಿದ್ದು, ಸೂಕ್ಷ್ಮ ಚಿಕಿತ್ಸೆಯಿಂದಾಗಿ ಒಂದು ವರ್ಷದ ಬಳಿಕ ತುಂಡಾದ ಕೈ ಹಾಗೂ ಬೆರೆಳುಗಳು ಸಂಪುರ್ಣವಾಗಿ ಕ್ರಿಯಾಶೀಲವಾಗಿವೆ. ಮೊದಲಿನಂತೆ ಬಾಲಕಿ ತನ್ನ ಕೈ ಮತ್ತು ಬೆರಳುಗಳನ್ನು ಉಪಯೋಗಿಸುತ್ತಿದ್ದಾಳೆ. ನಮ್ಮ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ