Belagavi NewsBelgaum NewsKannada NewsKarnataka NewsLatest

*ಬೆಳಗಾವಿ: ಅಂಗಡಿ, ವಾಣಿಜ್ಯ ಸಂಕೀರ್ಣಗಳ ನಾಮಫಲಕ: ಶೇ.60 ರಷ್ಟು ಕನ್ನಡ ಬಳಕೆಗೆ ಸೂಚನೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾನ್ಯ ಸರ್ಕಾರದ ಸುತ್ತೊಲೆಯಂತೆ ಜಿಲ್ಲೆಯಾದ್ಯಂತ/ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ/ಮುಂಗಟ್ಟುಗಳು, ವಾಣಿಜ್ಯ ಸಂಕಿರ್ಣಗಳ ನಾಮಫಲಕಗಳಲ್ಲಿ ಕನ್ನಡವನ್ನು ಪ್ರಧಾನವಾಗಿ ಅಂದರೆ, ಒಟ್ಟು ನಾಮಫಲಕದ ಶೇ.60 ರಷ್ಟು ಭಾಗ ಕನ್ನಡ ಭಾಷೆ ಬಳಸಬೇಕು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಅದೇ ರೀತಿಯಲ್ಲಿ ವಿಳಾಸದಲ್ಲಿ “ಬೆಳಗಾವಿ” ಎಂದು ನಮೂದಿಸಬೇಕಾಗಿರುತ್ತದೆ ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಉದ್ದಿಮೆದಾರರು ತಮ್ಮ ಉದ್ದಿಮೆಯ ನಾಮಫಲಕದಲ್ಲಿ ಬೆಳಗಾಂವ, ಬೆಲಗಾಮ್ ಎಂದು ನಮೂದಿಸಿದ್ದು ಹಾಗೂ ಶೇ.60 ರಷ್ಟು ಭಾಗವನ್ನು ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡದೇ ನಾಮಫಲಕವನ್ನು ಉಪಯೋಗಿಸುತ್ತಿದ್ದು ಕಂಡುಬಂದಿರುತ್ತದೆ.

ಇಂತಹ ಉದ್ದಿಮೆದಾರರಿಗೆ ಪಾಲಿಕೆ ವತಿಯಿಂದ ನೀಡಿದ ಪರವಾನಿಗೆಯನ್ನು ರದ್ದುಗೊಳಿಸಿ ಅಂಗಡಿಯನ್ನು ಬಂದ್/ಸೀಲ್ ಮಾಡಲಾಗವುದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button