ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ಬೆಳಿಗ್ಗೆಯಿಂದ ಬಿರುಸಿನಿಂದ ಸಾಗಿದ್ದ ಮತದಾನ ಮಧ್ಯಾಹ್ನದ ಹೊತ್ತಿಗೆ 9 ಕಡೆಗಳಲ್ಲಿ ಮತದಾನ ಸ್ಥಗಿತಗೊಂಡಿರುವ ಘಟನೆ ನಡೆದಿದೆ.
ಕಿತ್ತೂರು, ದೇವಗಾಂವ್, ಮೂಡಲಗಿ ಪಟ್ಟಣ, ನೇಸರಗಿ, ಕಾದ್ರೋಳ್ಳಿ, ಉಳ್ಳಿಗೇರಿ, ಗಳತಗಾ, ಅಥಣಿ ಮತಗಟ್ಟೆಗಳಲ್ಲಿ ಕಳೆದ ಮೂರು ಗಂಟೆಯಿಂದ ಮತದಾನ ಸ್ಥಗಿತಗೊಂಡಿದೆ. ಮತಗಟ್ಟೆಯ ಬಳಿ ಮತದಾರರು ಕಾದು ನಿಂತಿದ್ದಾರೆ.
ಮತಯಂತ್ರಗಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲೆ ಮತದಾನ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ