Kannada NewsLatest

ಬೆಳಗಾವಿ ಎಸಿ ಕಚೇರಿ ಜಪ್ತಿಗೆ ಕೋರ್ಟ್ ಆದೇಶ; ಸ್ಪಷ್ಟನೆ ನೀಡಿರುವ ಎಸಿ ಅಶೋಕ ತೇಲಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರಿಗೆ ಸೂಕ್ತ ಪರಿಹಾರ ವಿತರಣೆ ಮಾಡದ ಹಿನ್ನೆಲೆಯಲ್ಲಿ ಬೆಳಗಾವಿ ಎಸಿ ಕಚೇರಿ ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ.

ಸಾಂಬ್ರಾ ವಿಮಾನ ನಿಲ್ದಾಣ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಪರಿಹಾರ ವಿತರಣೆ ಮಾಡಿಲ್ಲ ಎಂದು ಹತ್ತು ರೈತರು ಕೋರ್ಟ್ ಮೆಟ್ಟಿಲೇರಿದ್ದರು. ನಮಗೆ ನೀಡಬೇಕಿದ್ದ 5.5 ಕೋಟಿ ಪರಿಹಾರವನ್ನು ನೀಡದೇ  ರೈತರಿಗೆ ವಂಚಿಸಲಾಗಿದೆ ಎಂದು ಆರೋಪಿಸಿದ್ದರು.

ರೈತರ ಅರ್ಜಿ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ನ್ಯಾಯಾಲಯ ಎಸಿ ಕಚೇರಿಯಲ್ಲಿನ ಕಂಪ್ಯೂಟರ್, ಪೀಠೋಪಕರಣ ಸೇರಿದಂತೆ ಕಚೇರಿಯನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ.

ಆದರೆ ಈ ಕುರಿತು ಪ್ರಗತಿವಾಹಿನಿಗೆ ಸ್ಪಷ್ಟನೆ ನೀಡಿರುವ ಬೆಳಗಾವಿ ಉಪವಿಭಾಗಾಧಿಕಾರಿ ಅಶೋಕ ತೇಲಿ, ಇದು ಎಸಿ ಕಚೇರಿ ತಪ್ಪಲ್ಲ, ಏರ್ ಫೋರ್ಸ್ ಜವಾಬ್ದಾರಿ. ಅವರು ಫೈಲ್ ಪೆಂಡಿಂಗ್ ಇಟ್ಟಿದ್ದರಿಂದ ಈ ರೀತಿಯಾಗಿದೆ. ಈ ಹಿಂದಿನ ಪ್ರಕರಣದಲ್ಲಿ ಎಸಿ ಕಚೇರಿಯನ್ನು ಮೊದಲ ಎದುರುದಾರರನ್ನಾಗಿ ಮಾಡಲಾಗಿತ್ತು. ಹಾಗಾಗಿ ಈ ರೀತಿ ಆದೇಶ ಹೊರಬಿದ್ದಿದೆ ಎಂದಿದ್ದಾರೆ.

ಉಪವಿಭಾಗಾಧಿಕಾರಿಗಳು ಯಾವುದೇ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ಮಾಡುತ್ತಾರೆ. ಆದರೆ ಪರಿಹಾರವನ್ನು ಸಂಬಂಧಿಸಿದ ಇಲಾಖೆಗಳೇ ನೀಡಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಬಿಜೆಪಿ ಶಾಸಕ ಸೇರಿ ಇಡೀ ಕುಟುಂಬಕ್ಕೆ ಹರಡಿದ ಕೊರೊನಾ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button