ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚೆನ್ನಮ್ಮ, ರೈಲು ನಿಲ್ದಾಣಕ್ಕೆ ಮಲ್ಲಮ್ಮ, ಬಸ್ ನಿಲ್ದಾಣಕ್ಕೆ ರಾಯಣ್ಣ ಹೆಸರಿಡಲು ಆಗ್ರಹ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ, ರೈಲು ನಿಲ್ದಾಣಕ್ಕೆ ಬೆಳವಡಿಯ ರಾಣಿ ಮಲ್ಲಮ್ಮ ಹಾಗೂ ಬಸ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿಡಲು ಆಗ್ರಹಿಸಿ ವಿವಿಧ ಕನ್ನಡ ಸಂಘಟನೆಗಳು ಇಂದು ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದವು.
ಕೋಟೆಯ ಕೆರೆಯ ಮಧ್ಯೆ ರಾಮಾಯಣದ ಆದಿಕವಿ ವಾಲ್ಮೀಕಿ ಮಹರ್ಷಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು ಹಾಗೂ ವೀರ ಸಿಂಧೂರು ಲಕ್ಷ್ಮಣನ ಹೆಸರನ್ನು ಬೆಳಗಾವಿಯ ಪ್ರಮುಖ ರಸ್ತೆಯೊಂದಕ್ಕೆ ಇಡಬೇಕೆಂದೂ ಸಹ ಮನವಿಯಲ್ಲಿ ಆಗ್ರಹಿಸಲಾಗಿದೆ.
ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ, ದೀಪಕ ಗುಡಗನಟ್ಟಿ, ಸಾಗರ್ ಬೋರಗಲ್ಲ, ಸುರೇಶ ಗವನ್ನವರ, ಬಾಳು ಜಡಗಿ, ಗಣೇಶ ರೋಖಡೆ, ವಿರೇಂದ್ರ ಗೋಬರಿ, ಸಿನೇ ಕಲಾವಿದ ಅಭಿಲಾಷ್, ಕಿರಣ ಅನಗೋಳ, ನಿತಿನ್ ಮುಖರಿ, ಬೆಳವಡಿಯ ಹಿರಿಯರು ಹಾಗೂ ನ್ಯಾಯವಾದಿ ಸಿದ್ದಗೌಡ ಮುಂತಾದವರು ಜಿಲ್ಲಾಧಿಕಾರಿ ಮಹೇಶ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ