ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಆನಂದವಾಡಿ ಮತ್ತು ವಡಗಾವಿಯ ಢೋಹರಗಲ್ಲಿಯಲ್ಲಿ ಮಹಿಳಾ ಕಾಯರ್ತರು ಜಂಟಿಯಾಗಿ ಸಭೆ ಸೇರಿದ್ರು.. ಅಖಿಲ ಭಾರತೀಯ ವೀರಶೈವ ಡೋಹರ ಕಕ್ಕಯ್ಯಾ ಮಹಿಳಾ ಮಂಡಲ ಸ್ಥಾಪನೆಯ ಬಗ್ಗೆ ಪ್ರಮುಖ ಜರ್ಚೆಗಳನ್ನು ಮಾಡಲಾಯ್ತು.
ವಡಗಾವಿಯ ಢೋಹರಗಲ್ಲಿಯಲ್ಲಿರುವ ಪ್ರಸಿದ್ಧ ದುರ್ಗಾದೇವಿ ಮಂದಿರಲ್ಲಿ ಎಲ್ಲ ಮಹಿಳೆಯರು ಒಗ್ಗಟ್ಟಾಗಿ ಬಂದಿದ್ದರು. ಮಹಿಳೆಯರು ಡೋಹರ ಸಮಾಜಕ್ಕಾಗಿ ತಮ್ಮ ಕೊಡುಗೆ ನೀಡುವ ಬಗ್ಗೆ ಶಪಥ ಮಾಡಿದ್ರು. ಅಶ್ವಿನಿ ಶ್ರೇಯಕರ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮಹಿಳೆಯರು ಸ್ವಾಲಂಬಿಯಾಗಿ ಬದುಕಬೇಕು. ಡೋಹರ ಸಮಾಜ ಮೊದಲಿನಿಂದ ಚರ್ಮದ್ಯೋಮವನ್ನೇ ನೆಚ್ಚಿಕೊಂಡು ಬಂದಿದೆ. ಆದರೆ ಕಾಲಂತರಗಳಿಂದ ಈ ವೃತ್ತಿ ಮಾಡುವ ಜನರು ಕಡಿಮೆ ಆಗ್ತಾ ಬರ್ತಾ ಇದ್ದಾರೆ. ಆದರೆ ಚರ್ಮದ್ಯೋಮದಲ್ಲಿ ತೊಡಗಿಸಿಕೊಂಡ ಕುಟುಂಬದ ಮಹಿಳೆಯರಿಗೆ ಯಾವುದೇ ಉದ್ಯೋಗ ಇಲ್ಲದಂತಾಗಿದೆ. ಹೀಗಾಗಿ ತಮಗೆ ಗೊತ್ತಿರುವ ಕಲೆಗಳನ್ನೇ ವೃತ್ತಿಯಾಗಿ ಸ್ವೀಕರಿಸಿ ಆದಾಯ ಹೆಚ್ಚಿಸಿಕೊಳ್ಳಲು ಅಶ್ವಿನಿ ಶ್ರೇಯಕರ್ ಕರೆ ನೀಡಿದರು.
ಇದೇ ವೇಳೆ ಶೀತಲ್ ಕಿತ್ತೂರು ಮಾತನಾಡುತ್ತಾ, ಮಹಿಳೆಯರು ಯಾವುದ್ರಲ್ಲೂ ಕಡಿಮೆ ಇಲ್ಲ. ಎಲ್ಲ ಕ್ಷೇತ್ರದಲ್ಲಿ ಎಲ್ಲ ಸಮಾಜದ ಮಹಿಳಾ ಕಾರ್ಯಕರ್ತರು ಅಭಿವೃದ್ಧಿ ಹೊಂದಿದ್ದಾರೆ. ನಮ್ಮ ಡೋಹರ ಸಮಾಜದ ಮಹಿಳೆಯರು ಮುಂದಕ್ಕೆ ಬರಬೇಕು. ಕೇವಲ ನಾಲ್ಕು ಗೋಡೆಯ ಮಧ್ಯೆ ಇರೋದೇ ಜೀವನ ಎಂದು ತಿಳಿದುಕೊಳ್ಳಬಾರದು. ಇದರಿಂದ ಆಚೆ ಬಂದು ಎಲ್ಲ ಮಹಿಳೆಯರಲ್ಲೂ ಜಾಗೃತೆ ಮೂಡಿಸುವ ಕೆಲಸಗಳಾಗಬೇಕೆಂದು ಹೇಳಿದರು.
ಇದೇ ವೇಳೆ ವೀರಶೈವ ಡೋಹರ ಕಕ್ಕಯ್ಯಾ ಮಹಿಳಾ ಮಂಡಳಿ ಸ್ಥಾಪನೆ ಮಾಡುವ ಕುರಿತು ಪ್ರಮುಖ ಚರ್ಚೆಗಳು ನಡೆದವು. ಮಹಿಳೆಯರ ಸವಾರ್ಂಗೀಣ ಅಭಿವೃದ್ಧಿ, ಮಹಿಳಾ ದೌರ್ಜನ್ಯ, ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಯ್ತು. ಡೋಹರ ಕಕ್ಕಯ್ಯ ಸಮಾಜದ ಶ್ರೇಯಕರ್, ಫೆÇೀಳ, ನಾರಾಯಣಕರ, ಗಜಾಕೋಶ, ಹುಟುಗಿ, ಕದಂ ಬಂಧುಗಳು ಭಾಗಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ