Kannada NewsLatest

ಅಕ್ರಮ ಪಡಿತರ ಅಕ್ಕಿ ಮಾರಾಟ; ಬೆಳಗಾವಿಯಲ್ಲಿ ಮೂವರ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಡಿತರ ಅಕ್ಕಿಯನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವೇಳೆ ಮೂವರು ಆರೋಪಿಗಳನ್ನು ಬೆಳಗಾವಿಯ ಖಡೇಬಜಾರ್ ಪೊಲೀಸರು ಬಂಧಿಸಿದ್ದಾರೆ.

ಸುಹಾಸ ಸುರೇಶ್ ಪಿಳವಕರ, ಮಹಾದೇವ ಲಕ್ಷ್ಮಣ ಪಾಟೀಲ್ ಹಾಗೂ ಅಹಮದ ಬಸೀರ ಅಹಮದ ಬಂಧಿತ ಆರೋಪಿಗಳು. ಇನ್ನು ಖಡೇಬಜಾರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ದೀರಜ್ ಶಿಂಧೆ ಸಿಬ್ಬಂದಿಯವರು, ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿತ್ತು.

ಆರೋಪಿಗಳಿಂದ ಒಂದು ಐಸರ್ ಕಂಪನಿಯ ಗುಡ್ಸ್ ವಾಹನ ಹಾಗು 2950 ಕೆಜಿ ತೂಕದ 118 ಅಕ್ಕಿ ಚೀಲಗಳನ್ನು ಜಪ್ತಿ ಮಾಡಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button