*ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ವಿಶೇಷ ಯೋಜನೆಯನ್ನು ತರಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿ ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಯ ಕಾಲಂ ಪೂಜೆಯನ್ನು ಭಾನುವಾರ ನೆರವೇರಿಸಿ ಅವರು ಮಾತನಾಡಿದರು. ನಾನು ಶಾಸಕಿಯಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕಾಗಿ 1,800 ಕೋಟಿ ರೂ.ಗಳನ್ನು ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದೇನೆ. 5 ವರ್ಷ ನಿರಂತರವಾಗಿ ಕ್ಷೇತ್ರದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಕೆಲಸ ಮಾಡಿದ್ದೇನೆ. ಆಗ ಕೊರೋನಾ, ಪ್ರವಾಹಗಳಿಂದಾಗಿ ಒಂದಿಷ್ಚು ಸಮಸ್ಯೆಯಾಯಿತು. ಆದಾಗ್ಯೂ ಅಭಿವೃದ್ಧಿಯನ್ನು ಮಾತ್ರ ನಿಲ್ಲಿಸಲಿಲ್ಲ. ಹಾಗಾಗಿಯೇ ಕಳೆದ ಚುನಾವಣೆಯಲ್ಲಿ ನನ್ನನ್ನು ಹಿಂದಿನ ಬಾರಿಗಿಂತ ಹೆಚ್ಚು ಮತಗಳಿಂದ ಗೆಲ್ಲಿಸಿದ್ದೀರಿ. ಇದು ಇನ್ನಷ್ಟು ಕೆಲಸ ಮಾಡಲು ನನಗೆ ಹುಮ್ಮಸ್ಸು ನೀಡಿದೆ. ಅಭಿವೃದ್ಧಿ ಕೆಲಸಗಳ ಮೂಲಕವೇ ನಿಮ್ಮ ಋಣ ತೀರಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಶಿವಾಜಿರಾವ್ ಅತವಾಡ್ಕರ್, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಗ್ರಾಮ ಪಂ. ಅಧ್ಯಕ್ಷೆ ಲಕ್ಷ್ಮೀ ಯಳ್ಳೂರಕರ್, ಮಧುರಾ ತೇರಸೆ, ಸುರೇಶರಾವ್ ರೇಡೆಕರ್, ಕಿಶೋರ್ ಕಾಕಡೆ, ಸಂಜಯ ತೆರಳೆ, ಅಮೂಲ್ ಬಾತ್ಕಂಡೆ, ಬಾಹು ತುಡವೇಕರ್, ರಾಜು ಕೊಚೆರೆ, ಸಂಗೀತಾ ಅಂಬೇಕರ್, ನಾಗೇಶ್ ತೆರಳೆ, ಅಗಸೆಕರ್ ಸರ್, ಅನಂತ ತುಡವೇಕರ್, ಯಲ್ಲಪ್ಪ ಚಿಕ್ಕಲಕರ್, ಬಾಳಕೃಷ್ಣ ತೇರಸೆ, ಮನೋಹರ್ ಬೆಳಗಾಂವ್ಕರ್, ರವೀಂದ್ರ ತೆರಳೆ, ಯಲ್ಲಪ್ಪ ಲೋಹಾರ್ ಹಾಗೂ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ