ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ನಗರದ ಹನುಮಾನ ನಗರದ ಭಕ್ತಿವಿಲಾಸ ಸಾಂಸ್ಕೃತಿಕ ಭವನದಲ್ಲಿ ರವಿವಾರ ಉಷಾ ತಾಯಿ ಫೌಂಡೇಶನ್, ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಸ್ಪೂರ್ತಿ ಅಸೋಸಿಯೇಷನ್ ಫಾರ್ ಬ್ಲೇಡ್ಸ್ ವತಿಯಿಂದ ಅಂಧರಿಗೆ ಮದುವೆ ನೆರವೇರಿಸಲಾಯಿತು.
ಬೆಳಗಾವಿಯ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ಟೆಲಿಕಾಲರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದೀಪಾ ಇಟಿ ಹಾಗೂ ಬೆಂಗಳೂರಿನ ರಾಜಾಜಿನಗರದ ಅಂಚೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್.ರವಿ ಅವರು ದಾಂಪತ್ಯಜೀವನಕ್ಕೆ ಕಾಲಿಟ್ಟರು.
ಈ ಸಂದರ್ಭದಲ್ಲಿ ಉಷಾ ತಾಯಿ ಫೌಂಡೇಶನ್ ಅನಿಲ ಪೋತದಾರ ಮಾತನಾಡಿ, ಹಲವಾರು ವರ್ಷಗಳಿಂದ ಅಂಗವಿಕಲರ ಸೇವೆ ಮಾಡುತ್ತಿದ್ದೇವೆ. ಅಂಧರಿಗಾಗಿ ವಿಶೇಷತರಬೇತಿ ಶಾಲೆ ಹಾಗೂ ಅವರಿಗೆ ಕೆಲಸಗಳನ್ನು ನೀಡಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವುದಕ್ಕೆ ಸಹಕಾರ ನೀಡಿದ್ದೇವೆ. ರವಿ ಹಾಗೂ ದೀಪಾ ಅವರ ಮದುವೆ ನಮ್ಮ ಸಂಸ್ಥೆ ಮಾಡುತ್ತಿರುವ 25 ನೇ ಮದುವೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಉಷಾ ತಾಯಿ ಫೌಂಡೇಶನ್ ಅದ್ಯಕ್ಷ ಅನಿಲ, ಬೆಳಗಾವಿ ಸಮರ್ಥನಂ ಅಂಗವಿಕಲರ ಸಂಸ್ಥೆ ವ್ಯವಸ್ಥಾಪಕ ಅರುಣ ಕುಮಾರ ಎಂ.ಜಿ, ಸಮರ್ಥನಂ ಅಂಗವಿಕಲರ ಸಂಸ್ಥೆ ಸಂಸ್ಥಾಪಕರು ಮಹಾಂತೇಶ ಜಿ.ಕಿವುಡಸನ್ನವರ, ವಾಸಂತಿ ಸವನೂರ, ವಿರೇಶಕಿವುಡಸನ್ನವರ ಹಾಗೂ ಎಸ್‍ರವಿ ಪೋಷಕರಾದ ಎಸ್ ಮಹೇಶ ಹಾಗೂ ಮದುರಾ ಮಹೇಶ ಉಪಸ್ಥಿತರಿದ್ದರು.
ಅವಿಚ್ಛಿನ್ನ ಪರಂಪರಾ ಕೂಡ್ಲಿ-ಶೃಂಗೇರಿ ಮಠಕ್ಕೆ ಪೀಠಾಧಿಪತಿ ನೇಮಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ