ಪ್ರಗತಿವಾಹಿನಿ ಸುದ್ದಿ, ಮಾಂಜರಿ
ಚಿಕ್ಕೋಡಿ ತಾಲೂಕಿನ ಚಂದೂರಿನ ಯೋಧನೋರ್ವ ಕಾಶ್ಮೀರ ಗಡಿಯಲ್ಲಿ ಗುಂಡಿಗೆ ಬಲಿಯಾಗಿದ್ದಾನೆ.
ಪ್ರವೀಣ ಪಟ್ಟಣಕುಡೆ ಎನ್ನುವ ಯೋಧ ಶುಕ್ರವಾರ ಸಾವನ್ನಪ್ಪಿದ್ದು, ಆತನ ಮೃತದೇಹ ಭಾನುವಾರ ಸ್ವಗ್ರಾಮಕ್ಕೆ ಬರಲಿದೆ. ಗುಂಡಿನ ಗಾಯಗಳಿಂದಾಗಿ ಪ್ರವೀಣ ಸಾವನ್ನಪ್ಪಿದ್ದಾಗಿ ಮಾಹಿತಿ ಬಂದಿದ್ದು, ಗುಂಡು ತಗುಲಿದ್ದು ಹೇಗೆ? ಉಗ್ರರ ದಾಳಿಯೋ ಎನ್ನುವ ಬಗ್ಗೆ ವಿವರವಿಲ್ಲ.
ಮೃತದೇಹವನ್ನು ನವದೆಹಲಿಯಿಂದ ವಿಮಾನದ ಮೂಲಕ ಪುಣೆಗೆ ಕಳುಹಿಸಲಾಗಿದೆ. ಭಾನುವಾರ ಬೆಳಗ್ಗೆ 8 ಗಂಟೆಗೆ ಪುಣೆಯಿಂದ ರಸ್ತೆ ಮೂಲಕ ಸ್ವಗ್ರಾಮ ತಲುಪಲಿದೆ ಎನ್ನುವ ಮಾಹಿತಿ ಬಂದಿದೆ.