Cancer Hospital 2
Bottom Add. 3

*ಎಲ್ಲರನ್ನೂ ಜೊತೆಯಾಗಿಸಿಕೊಂಡು ಕೆಲಸ ಮಾಡುತ್ತೇನೆ: ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡಾಲ ಅಂಕಲಗಿ ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಹೆಬ್ಬಾಳಕರ್, ನಾನು ರಾಜ್ಯಕ್ಕೆ ಮಂತ್ರಿಯಾದರೂ ನಿಮ್ಮ ಊರಿಗೆ ಎಂದಿಗೂ ಮೊಮ್ಮಗಳೇ. ಯಾವುದೇ ಭೇದ ಭಾವ ಮಾಡದೆ ಗ್ರಾಮದ ಮತ್ತು ಇಡೀ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಎಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.

​ ಕಳೆದ ಚುನಾವಣೆಯಲ್ಲಿ ನೀವೆಲ್ಲ ಯಾರ ಮಾತನ್ನೂ ಕೇಳದೆ ನನ್ನ ಅಭಿವೃದ್ಧಿ ನೋಡಿ ಮತ ಹಾಕಿದ್ದೀರಿ. ಕೆಲವರು ಬೇರೆಯವರ ಮಾತು ಕೇಳಿ ಮತ ಹಾಕದಿರಬಹುದು. ಆದರೆ ಇಂದು ಅವರಿಗೆ ತಪ್ಪಿನ ಅರಿವಾಗಿದೆ. ಆದರೂ ಅವರನ್ನೆಲ್ಲ ಜೊತೆಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪರಮ ಪೂಜ್ಯ ರಾಚಯ್ಯ ಸ್ವಾಮಿಗಳು, ಗ್ರಾಮದ ಹಿರಿಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ ಸಿ ಪಾಟೀಲ ಅಣ್ಣ, ಕೆಪಿಸಿಸಿ ಸದಸ್ಯ ಸುರೇಶ ಇಟಗಿ, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಮಾಸಣ್ಣವರ, ಉಪಾಧ್ಯಕ್ಷೆ ಲಕ್ಷ್ಮೀ ಹಳೆಮನಿ, ಮಹಾದೇವಿ ಪಡಗಿ, ಸುವರ್ಣ ತೊಲಗಿ, ಮಹಾದೇವಿ ಬೆಳಗಾವಿ, ಸಾವಕ್ಕ ಅಗಸಿಮನಿ, ರಾಜಶ್ರೀ ಫವಣಿ, ಶಾಂತವ್ವ ಹಂಚಿನಮನಿ, ನಾಗಪ್ಪ ಕಾಳ್ಯಾನಟ್ಟಿ, ಸಿದ್ದಪ್ಪ ಚಾಪಗಾಂವಿ, ವಿಠ್ಠಲ ಅರ್ಜುನವಾಡಿ, ಬಸವಂತ ನಾಯಕ್, ಲಕ್ಕಪ್ಪ ಮುನವಳ್ಳಿ, ಅಜ್ಜಪ್ಪ ಮುಗಪ್ಪಗೋಳ, ರಾಮನಗೌಡ ಪಾಟೀಲ, ಚಂದ್ರು ಖನಗಾಂವಿ, ಮುಶೆಪ್ಪ ಹಟ್ಟಿ, ರಾಮಪ್ಪ ಅರಳಿಕಟ್ಟಿ, ಯಲಗೌಡ ಪಾಟೀಲ ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.

Bottom Add3
Bottom Ad 2

You cannot copy content of this page