Education

*ಎಸ್.ಎಸ್.ಎಲ್.ಸಿಯಲ್ಲಿ ಬಾಗಲಕೋಟೆ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ; ಟಾಪರ್ಸ್ ಗಳ ಪಟ್ಟಿ ಇಲ್ಲಿದೆ*

ಪ್ರಗತಿವಾಹಿನಿ ಸುದ್ದಿ: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಸುದ್ದಿಗೋಷ್ಠಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ.

ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಶೇ.94ರಷ್ಟು ಫಲಿತಾಂಶ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಗೆ 2ನೇ ಸ್ಥಾನ ಶೇ.92.12ರಷ್ಟು ಫಲಿತಾಂಶ ಬಂದಿದೆ, ಶಿವಮೊಗ್ಗ ಜಿಲ್ಲೆ 3ನೇ ಸ್ಥಾದಲ್ಲಿದ್ದು, ಶೇ.88.67ರಷ್ಟು ಫಲಿತಾಂಶ ಬಂದಿದೆ. ಯಾದಗಿರಿ ಜಿಲ್ಲೆ ಕೊನೇ ಸ್ಥಾನದಲ್ಲಿದ್ದು, ಶೇ.50.59ರಷ್ಟು ಫಲಿತಾಂಶ ಬದಿದೆ

ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಬಾಗಲಕೋಟೆಯ ವಿದ್ಯಾರ್ಥಿನಿ ಅಂಕಿತಾ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಅಂಕಿತಾ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಎಸ್.ಎಸ್.ಎಲ್. ಸಿ ಟಾಪಾರ್ಸ್ ಲಿಸ್ಟ್ ಈ ಕೆಳಗಿನಂತಿದೆ

ಅಂಕಿತಾ ಬಾಗಲಕೋಟೆ 625/625
ಮೇದಾ ಪಿ ಶೆಟ್ಟಿ ಬೆಂಗಳೂರು 624/625
ಹರ್ಷಿತಾ ಡಿಎಂ ಮಧುಗಿರಿ 624/625
ಚಿನ್ಮಯ್ ದಕ್ಷಿಣ ಕನ್ನಡ 624/625
ಸಿದ್ದಾಂತ್ ಚಿಕ್ಕೋಡಿ 624/625
ದರ್ಶನ್, ಚಿನ್ಮಯ್, ಶ್ರೀರಾಮ್ ಶಿರಸಿ 624/625 ಅಂಕಗಳನ್ನು ಪಡೆದಿದ್ದಾರೆ.

ಪಾಸಾದವರೂ ಕೂಡ ಅಂಕ ಹೆಚ್ಚಿಸಿಕೊಳ್ಳಲು 2 ಹಾಗೂ 3ನೇ ಬಾರಿ ಪರೀಕ್ಷೆ ಬರೆಯಲು ಅವಕಶ ನೀಡಲಾಗಿದೆ. ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ವೆಬ್ ಸೈಟ್ ನಲ್ಲಿಯೂ ಫಲಿತಾಂಶ ವೀಕ್ಷಿಸಬಹುದು.

karresults.nic.in ಅಥವಾ kseab.karnataka.gov.in ನಲ್ಲಿ ವೀಕ್ಷಿಸಬಹುದು.

Related Articles

Back to top button