EducationKannada NewsKarnataka NewsLatest

*ಶಿಕ್ಷಕರ ವರ್ಗಾವಣೆ: ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಜೂನ್ 25ಕ್ಕೆ ಶಾಲೆಗಳಲ್ಲಿ ಮರು ಹಂಚಿಕೆ ನಂತರ ಮಂಜೂರು ಮಾಡಿರುವ ಹುದ್ದೆಗಳ ಕುರಿತು ಆದೇಶ ಹೊರಡಿಸುವುದರಿಂದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಜುಲೈ 5ರ ವರೆಗೆ ವರ್ಗಾವಣೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಜಿಲ್ಲಾ ಹಂತದ ವರ್ಗಾವಣೆ ಕೌನ್ಸಲಿಂಗ್ ಪ್ರಾಥಮಿಕ ಜುಲೈ 24ರಿಂದ 26 ಮತ್ತು ಪ್ರೌಢ ಶಾಲೆ 28 ಮತ್ತು 29ರಂದು ನಡೆಯಲಿದೆ. ವಿಭಾಗೀಯ ಕೌನ್ಸಲಿಂಗ್ ಪ್ರಾಥಮಿಕ ಆಗಸ್ಟ್ 1ರಿಂದ 4, ಪ್ರೌಢಶಾಲೆ ಆಗಸ್ಟ್ 5 ಮತ್ತು 6. ಪರಸ್ಪರ ವರ್ಗಾವಣೆ ಕೌನ್ಸಲಿಂಗ್ ಆಗಸ್ಟ್ 11ರಂದು ಮತ್ತು ವಿಭಾಗದ ಹೊರಗಿನ ವರ್ಗಾವಣೆ ಆಗಸ್ಟ್ 12ರಂದು ನಡೆಯಲಿದೆ.

ವಿವರಗಳಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ –

https://mail.google.com/mail/u/0?ui=2&ik=8ea932610f&attid=0.1&permmsgid=msg-a:r2887000894217531249&th=1978e4a66ced108e&view=att&disp=inline&realattid=1978e4a49501d7b383a1&zw

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button