Belagavi NewsBelgaum NewsKannada NewsKarnataka News

*ರೈತರಿಗೆ ಮಹತ್ವದ ಸೂಚನೆ ನೀಡಿದ ಕೃಷಿ ಇಲಾಖೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಬೆಳಗಾವಿ ಜಿಲ್ಲೆಯಲ್ಲಿ ಹೆಸರು ಒಂದು ಪ್ರಮುಖ ದ್ವಿದಳ ಬೆಳೆಯಾಗಿದ್ದು 39000 ಹೆ. ಕ್ಷೇತ್ರದಲ್ಲಿ ಬಿತ್ತನೆ ಆಗಿದೆ ಹಾಗೂ ಬಿತ್ತನೆ ಕಾರ್ಯ ಮುಂದುವರೆದಿದೆ. ಈಗ ಸಗ ಬೆಳೆಯು ಬಿತ್ತನೆಯಿಂದ 15 ರಿಂದ 20 ದಿನದ ಬೆಳೆ ಇದ್ದು, ಅಲ್ಲಲ್ಲಿ ಹೆಚ್ಚಿನ ತೇವಾಂಶದ ಕಾರ್ ಕೊರತೆ ಉಂಟಾಗಿ ಎಲೆಗಳು ತೆಳು ಹಳದಿ ವರ್ಣಕ್ಕೆ ತಿರುಗಿದ್ದು ಕಂಡುಬಂದಿದೆ.

ಈ ಸಮಸ್ಯೆ ನಿವಾರಣೆಗೆ ಎಲೆಗಳ ಮೂಲಕ ಸಿಂಪರಣೆಯಿಂದ ಪೋಷಕಾಂಶ ಪೂರೈಕೆ ಮಾಡುವದು ಅವಶ್ಯವಿದೆ. ಕಾರಣ ಈ ರೀತಿ ಸಮಸ್ಯೆ ಕಂಡುಬಂದಲ್ಲಿ ಬೆಳೆ 20 ದಿನಕ್ಕಿಂತ ಕಡಿಮೆ ಇದ್ದಲ್ಲಿ ಪ್ರತಿಲೀಟರ್ ನೀರಿಗೆ ನೀರಿನಲ್ಲಿ ಕರಗುವ ಪೋಷಕಾಂಶಗಳಾದ 19:19:19 ಮಿಕ್ಸರ್ ರಸಗೊಬ್ಬರ 2ಗ್ರಾಂ 13:0:45 ಮಿಕ್ಸರ್ ರಸಗೊಬ್ಬರ 2 ಗ್ರಾಂ ನೀರಿನಲ್ಲಿ ಬೆರೆಸಿ ಎಲೆಗಳಿಗೆ ಸಿಂಪಡಿಸಿರಿ ಇದರ ಜೊತೆಗೆ ರಸ ಹೀರುವ ಡ್ರಿಪ್ಸ್ ಹಾಗೂ (ಪಾವಡರಿ ಮಿಲ್ಲಿಯು) ಬೂದು ರೋಗ ನಿರ್ವಹಣೆಗೆ 1 ಗ್ರಾಂ ಥೈಯೋಮಿಥಾಕ್ಸಾಮ್ ಕೀಟನಾಶಕ ಮತ್ತು 1 ಗ್ರಾಂ ಕಾರ್ಬನ್ ಡೈಜಿಮ್ ಅಥವಾ (1 ಗ್ರಾಂ ಕಾರ್ಬನ್‌ ಡೈಜಿಮ್ + ಮ್ಯಾಂಕೊಜೆಬ್) ಸಂಯುಕ್ತ ಶೀಲೀಂದ್ರ ನಾಶಕ ಬೆರೆಸಿ ಸಿಂಪರಣೆ ಕೈಗೊಳ್ಳುವದರಿಂದ ಸಸ್ಯ ಸಂರಕ್ಷಣೆ ಆಗುವದು. ಒಂದು ವೇಳೆ ಬೆಳೆ ಅವಧಿ 20 ರಿಂದ 30 ದಿವಸಗಳಾಗಿದ್ದರೆ (19:19:19-3 ಗ್ರಾಂ + 13:0:45 3ಗ್ರಾಂ) ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವದು.

Home add -Advt

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಹಾಗೂ ಈ ರೀತಿ ಕ್ರಮ ವಹಿಸಿ ಬೆಳೆ ಸಂರಕ್ಷಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರು ರೈತ ಬಾಂದವರಲ್ಲಿ ಕೋರಿರುತ್ತಾರೆ.

Related Articles

Back to top button