Kannada NewsLatestNational
*ಸುಪ್ರೀಂ ಕೋರ್ಟ್ ರಜೆಯಲ್ಲಿ ಮಹತ್ವದ ಬದಲಾವಣೆ*

ಪ್ರಗತಿವಾಹಿನಿ ಸುದ್ದಿ: ಮುಂದಿನ ತಿಂಗಳಿಂದ ಸುಪ್ರೀಂ ಕೋರ್ಟ್ ಗೆ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರುವುದಿಲ್ಲ.
ಸುಪ್ರೀಂಕೋರ್ಟ್ ನಿಯಮಗಳು 2025ರ ಕುರಿತು ಕಾನೂನು ಮತ್ತು ನ್ಯಾಯ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ಈ ವಿಷಯ ತಿಳಿಸಿದೆ.
ಸರ್ವೋಚ್ಛ ನ್ಯಾಯಾಲಯದ ರಿಜಿಸ್ಟ್ರಿ ಮತ್ತು ಕಚೇರಿಯಲ್ಲಿ ಎರಡನೇ ಹಾಗೂ ನಾಲ್ಕನೇ ಶನಿವಾರ ವಾರದ ದಿನವಾಗಲಿದೆ. ಈ ನಿಯಮ ಜುಲೈ 14ರಂದು ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಹೊಸ ಆದೇಶದ ಹಿನ್ನೆಲೆಯಲ್ಲಿ ಇನ್ಮುಂದೆ ಸುಪ್ರೀಂ ಕೋರ್ಟ್ ವಾರದ ಎಲ್ಲಾ ದಿನಗಳಲ್ಲಿಯೂ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಲಿದೆ. ರಜಾದಿನಗಳು ಹಾಗೂ ಭಾಗಶಃ ರಜಾದಿನಗಳಿಗೆ ಅದು ಅನ್ವಯವಾಗುವುದಿಲ್ಲ.
ಅಲ್ಲದೇ ತುರ್ತು ಸಲ್ಲಿಕೆಗಳು ಎಂದಿನ ವಾರದ ದಿನಗಳಲ್ಲಿ ಸಂಜೆ 4:30 ರ ಬಳಿಕವೂ ಸ್ವೀಕಾರಾರ್ಹವಾಗಿರುತ್ತದೆ ಎಂದು ತಿಳಿಸಿದ್ದಾರೆ.




