Belagavi NewsBelgaum NewsEducation

*ಕೆಎಲ್ಇ ಹೊಮಿಯೋಪಥಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವ ಪರಿಸರ ದಿನ ಅಂಗವಾಗಿ ಕೆಎಲ್ಇ ಹೊಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕವು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ಬಸವಣ ಕುಡಚಿ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 

ಪ್ಲಾಸ್ಟಿಕಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಮರುಬಳಕೆಯ ವಸ್ತುಗಳನ್ನು ಬಳಸುವಂತೆ ತಿಳಿಸಿ, ಗ್ರಾಮಸ್ಥರಿಗೆ ಮರುಬಳಕೆಯ ಚೀಲಗಳನ್ನು ವಿತರಿಸಲಾಯಿತು.

Home add -Advt

ಮಹಾವಿದ್ಯಾಲಯದ ವಿದ್ಯಾರ್ಥಿಗಳು ಫ್ಲ್ಯಾಷ್ ಮಾಬ್ ಮೂಲಕ ಜಾಗೃತಿ ರ್ಯಾಲಿಯನ್ನು ಮಾಡಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯರರಾದ ಡಾ. ಎಂ ಎ ಉಡಚನಕರ, ಡಾ. ಸ್ವರೂಪಾ ಪಾಟೀಲ, ಎನ್ ಎಸ್ ಎಸ್ ಅಧಿಕಾರಿಗಳಾದ ಡಾ. ಮಂಜುನಾಥ ಗಡ್ಡಿ, ಡಾ. ಚೇತನ ಕಾಂಬ್ಳೆ, ಡಾ. ಮೊನಿಕಾ ಮೊಸೆಸ್ ಲೊಬೊ, ಡಾ. ರಾಜಕುಮಾರ ದೇಸಾಯಿ, ಡಾ. ವಿವೇಕ ಹೆಬ್ಬಾಳ, ಡಾ. ನಿಲೇಶ ಚೌದರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button