Belagavi NewsBelgaum NewsEducation

*ನಿಪ್ಪಾಣಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡಕ್ಕೆ ಅನುದಾನ ಬಿಡುಗಡೆ: ಶಾಸಕಿ ಶಶಿಕಲಾ ಜೊಲ್ಲೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಕ್ಕೆ 3 ಕೋಟಿ ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಗುವುದು.ಈ ಕಾಲೇಜು ಹೆಚ್ಚುವರಿ ತರಗತಿ ಕೊಠಡಿ,ಪ್ರಯೋಗಾಲಯ,ಮೂಲಭೂತ ಸೌಕರ್ಯ ಹಾಗೂ ಹೈ ಟೆಕ್ ಕಟ್ಟಡ,ನಿರ್ಮಾಣ ವಾಗುವುದು.ನಿಪ್ಪಾಣಿ ನಗರಸಭೆ ವತಿಯಿಂದ 2 ಎಕರೆ ಜಾಗವನ್ನು ಬಸವೇಶ್ವರ ಪೊಲೀಸ್ ಠಾಣೆ ಎದುರಿಗೆ ಕಾಲೇಜಿಗೆ ಜಾಗ ನೀಡಿದ್ದು ಅಲ್ಲಿ ಹೈ ಟೆಕ್ ಕಾಲೇಜನು ನಿರ್ಮಿಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಲಾಗುವುದು.

2020-21ನೇ ಸಾಲಿನಲ್ಲಿ ನಾನು ಸಚಿವೆಯಾದ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಅಶ್ವತ ನಾರಾಯಣ ಅವರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿಪ್ಪಾಣಿಗೆ ಮಂಜೂರು ಮಾಡುವಂತೆ ಮನವಿ ನೀಡಲಾಗಿದ್ದು ನಮ್ಮ ಮನವಿಗೆ ಸ್ಪಂದಿಸಿ ನಮ್ಮ ಬಿಜೆಪಿ ಸರ್ಕಾರವಿದ್ದಾಗ 2020-21 ಸಾಲಿನಲ್ಲಿ ಮಂಜೂರು ಆಗಿದ್ದು ಸ್ತ್ವಂತ ಕಟ್ಟಡವಿಲ್ಲದ ಕಾರಣ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ತರಗತಿ ಪ್ರಾರಂಭವಾಗಿರುತ್ತದೆ.ಈಗಿನ ಕಾಂಗ್ರೆಸ್ ಸರಕಾರದಲ್ಲಿ ಹಲವು ಬಾರಿ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ,ಅಧಿವೇಶನದಲ್ಲಿ ಸಚಿವರ ಗಮನ ಸೆಳೆದು ಧ್ವನಿ ಎತ್ತಿ 3 ಕೋಟಿ ಅನುದಾನ ಮಂಜೂರು ಮಾಡಿಸಿರುತ್ತೇನೆ.

ನಿಪ್ಪಾಣಿಯಲ್ಲಿ ಇಲ್ಲಿಯವರೆಗೆ ಸರ್ಕಾರಿ ಪದವಿ ಕಾಲೇಜು ಇರಲಿಲ್ಲ. ಆದರೆ ಪದವಿ ಕಾಲೇಜು ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿ,ಈಗ ಅನುದಾನ ಬಿಡುಗಡೆಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button