ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್ಇಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಬೆಳಗಾವಿ ಹಾಗೂ ರೋಟರಿ ಕ್ಲಬ್ ಬೈಲಹೊಂಗಲ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಬೈಲಹೊಂಗಲ ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ, ಬೈಲಹೊಂಗಲ ಇವರ ಸಂಯುಕ್ತಾಶ್ರಯದಲ್ಲಿ ಸೂಪರ್ ಸ್ಪೆಷಾಲಿಟಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ದಿನಾಂಕ 23 ಜುಲೈ 2022 ರಂದು ಬೆಳಗ್ಗೆ 10ಗಂಟೆ ಯಿಂದ ಮದ್ಯಾಹ್ನ 1ಗಂಟೆ ವರೆಗೆ ಕೆಎಲ್ಇಎಸ್ ಡೆಂಟಲ್ ಕ್ಲಿನಿಕ್,ಸಾಧುನವರ ಕಾಂಪ್ಲೆಕ್ಸ್, ಶ್ರಿ ಚಿದಂಬರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆವರಣ(ಓಲ್ಡ್ ಪ್ರೇರಣಾ ಶಾಲೆ) ಬೈಲಹೊಂಗಲ ದಲ್ಲಿ ಆಯೋಜಿಸಲಾಗಿದೆ.
ನರರೋಗ ಚಿಕಿತ್ಸೆ: ತಲೆನೋವು, ಸೊಂಟ ನೋವು, ಕುತಿಗೈನೋವು, ಬೆನ್ನುನೋವು,ಮೆದುಳಿನ ಗಾಯ,ಬೆನ್ನು ಹುರಿಯ ಗಾಯ, ಕೈ-ಕಾಲುಗಳ ಸೆಳೆತ,ನರ ವ್ಯವಸ್ಥೆಗೆ ತೊಂದರೆಗಳಿದ್ದರೆ ಶಿಬಿರದ ಲಾಭ ಪಡೆಯಿರಿ ಅಲ್ಲದೆ ಗ್ಯಾಸ್ಟ್ರೋಎಂಟರಾಲಜಿ ಚಿಕಿತ್ಸೆ: ಎಲ್ಲಾ ರೀತಿಯ ಹೊಟ್ಟೆಯ/ಜೀರ್ಣಕ್ರಿಯೆಯ ತೊಂದರೆಗಳು,ಅಸಿಡಿಟಿ ಮಲ ವಿಸರ್ಜನೆ ಯ ಸಮಸ್ಯೆ ವಾಂತಿ,ರಕ್ತ ಮಿಶ್ರಿತ ವಾಂತಿ,ಕಾಮಾಲೆ ರೋಗ ಸೇರಿದಂತೆ ಗ್ಯಾಸ್ಟ್ರೊಎಂಟರಾಲಜಿಯ ಸಮಸ್ಯೆಗಳು ಇರುವವರು ಈ ಉಚಿತ ಆರೋಗ್ಯ ಶಿಭಿರದ ಲಾಭ ಪಡೆದು ಕೊಳ್ಳಬೇಕಾಗಿ ಕೋರಲಾಗಿದೆ
ನೊಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ:
9916885402
8792690417
9740200261
8722075324
ಅಂಗಾಂಗ ದಾನ ಮಾಡಿ ನಾಲ್ಕು ಜಿವಗಳಿಗೆ ಬದುಕುಕೊಟ್ಟ ಯುವಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ