ಪ್ರಗತಿವಾಹಿನಿ ಸುದ್ದಿ: ಬಾರ್ ವೊಂದರಲ್ಲಿ ನಡೆದ ಗಲಾಟೆ ವೇಳೆ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ನಡೆದಿದೆ.
ಲಕ್ಷ್ಮಣ ಮರನೂರ (45) ಮೃತ ದುರ್ದೈವಿ. ಕಂಠಪೂರ್ತಿ ಕುಡಿದು ಟೈಟ್ ಆಗಿದ್ದ ವ್ಯಕ್ತಿ ಮೇಲೆ ಇಬ್ಬರು ಗಲಾಟೆ ನಡೆಸಿ ಥಳಿಸಿದ್ದರು. ಬಾರ್ ನಲ್ಲಿ ಟೇಬಲ್ ಅಕ್ಕ-ಪಕ್ಕ ಕುಳಿತಿದ್ದ ವ್ಯಕ್ತಿಗಳ ನಡುವೆ ಜಗಳ ಆರಂಭವಾಗಿ ಹೊಡೆದಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಲಕ್ಷ್ಮಣ ಮರನೂರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗೆ ಥಳಿಸಿದ ಪರಿಣಾಮ ಕೆಳಗೆ ಬಿದ್ದ ವ್ಯಕ್ತಿ ಮೇಲೆ ಎದ್ದಿಲ್ಲ. ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಬರಂಗಪ್ಪ ಪಾಟೀಲ್, ಈರಪ್ಪ ತುಂಗಳ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಘಟನೆ ಬಳಿಕ ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ