ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಆರೋಗ್ಯ ಇಲಾಖೆಯ ತಜ್ಞರ ಪ್ರಕಾರ ಕೋವಿಡ್ ಮೂರನೇಯ ಅಲೆ ಬರುವ ಸಾಧ್ಯತೆಗಳು ಹೆಚ್ಚಾಗಿದ್ದು, ಈ ಮೂರನೇಯ ಅಲೆಯನ್ನು ತಡೆಯಲು ನಾವೇಲ್ಲರೂ ಸನ್ನದ್ದರಾಗಬೇಕಾಗಿದೆ ಎಂದು ಭಾರತೀಯ ಜೈನ ಸಂಘಟನೆಯ ಸಂಸ್ಥಾಪಕ ಶಾಂತಿಲಾಲ ಮುಥ್ಥಾ ಕರೆ ನೀಡಿದರು.
ಬೆಳಗಾವಿ ನಗರದ ರೂಪಾಲಿ ಕನ್ವೇಷನ ಹಾಲ್‌ದಲ್ಲಿ ಶುಕ್ರವಾರ ನಡೆದ ಕೋವಿಡ್ ಮುಕ್ತ ಗ್ರಾಮ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಈಗಾಗಲೇ ಇಡಿ ವಿಶ್ವದ ಜನರು ಕೋವಿಡ್ ಎರಡು ಅಲೆಗಳಿಂದ ತತ್ತರಿಸಿ ಹೋಗಿದ್ದಾರೆ. ಕೋವಿಡ್ ಲಸಿಕೆ ನೀಡುತ್ತಿರುವ ಪರಿಣಾಮದಿಂದಾಗಿ ಇಂದು ಕೋವಿಡ್ ನ್ನು ಹತೋಟಿಗೆ ತರಲಾಗಿದೆ. ಆದರೆ ತಜ್ಞರ ಪ್ರಕಾರ ಮೂರನೇಯ ಅಲೆಯು ಚಿಕ್ಕಮಕ್ಕಳ ಮೇಲೆ ಮತ್ತು ಗ್ರಾಮೀಣ ಮಟ್ಟದಲ್ಲಿ ಹರಡುವ ಸಾಧ್ಯತೆಗಳ ಬಗ್ಗೆ ವರದಿಯಾಗಿದ್ದು, ಈ ಹಿನ್ನೆಯಲ್ಲಿ ಭಾರತೀಯ ಜೈನ ಸಂಘಟನೆ ಕರ್ನಾಟಕ ಸರಕಾರದೊಂದಿಗೆ ಕೈಜೋಡಿಸಿ ಕೋವಿಡ್ ಮುಕ್ತ ಗ್ರಾಮಕ್ಕಾಗಿ ನಿರ್ಧೀಷ್ಟ ಯೋಜನೆಯೊಂದಿಗೆ ಕಾರ್ಯನಿರ್ವಹಿಸಲು ಮುಂದಾಗಿದೆ ಎಂದು ಹೇಳಿದರು.
ಕೋವಿಡ್ ನಿಯಂತ್ರಣದಲ್ಲಿದೆ ಎಂದು ಭಾವಿಸಿ ನಾವು ಮೈಮರೆಯುವಂತಿಲ್ಲ. ಮೂರನೇಯ ಅಲೆ ಚಿಕ್ಕ ಮಕ್ಕಳ ಮೇಲೆ ಪರಿಣಾಮ ಬೀರಬಹುದಾಗಿದೆ. ಕೋವಿಡ್ ಮೊದಲನೇಯ ಮತ್ತು ಎರಡನೇಯ ಅಲೆಯಲ್ಲಿ ನಾವು ಸಾಕಷ್ಟು ಕಹಿ ಅನುಭವಗಳನ್ನು ಅನುಭವಿಹಿಸಿದ್ದೇವೆ. ಅದರ ಜೊತೆಯಲ್ಲಿಯೇ ನಾವು ಬದುಕಬೇಕಾಗಿದೆ. ಕೋವಿಡ್ ಸಂದರ್ಭದಲ್ಲಿ ತಾಂತ್ರಿಕತೆಯ ಬಗ್ಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸಗಳಾಗಿವೆ. ತಾಂತ್ರಿಕತೆ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗ ಮಾಡಲಾಗುತ್ತಿದೆ. ಈ ತಾಂತ್ರಿಕತೆಯನ್ನು ನಾವು ಸದ್ಬಳಕೆ ಮಾಡಿಕೊಂಡು ಗ್ರಾಮೀಣ ಜನರಲ್ಲಿ ಕೋವಿಡ್ ನಿಯಂತ್ರಣ ಮತ್ತು ವಹಿಸುವ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳುವಳಿಕೆ ನೀಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಅಭಿಯಾನಕ್ಕಾಗಿ ಒಂದು ನಿರ್ಧಿಷ್ಟವಾದ ಯೋಜನೆಯೊಂದನ್ನು ಸಿದ್ದ ಪಡಿಸಲಾಗಿದೆ. ಈ ಯೋಜನೆಯು ಈಗಾಗಲೇ ಮಹಾರಾಷ್ಟ್ರದಲ್ಲಿ ಯಶಸ್ವಿ ರೀತಿಯಾಗಿ ನಡೆಯುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಸರಕಾರ, ಆರೋಗ್ಯ ಇಲಾಖೆ, ಎನ್.ಎಸ್.ಎಸ್. ತಂಡಗಳು , ಎನ.ಸಿ.ಸಿ.ತಂಡಗಳು ಗ್ರಾಮ ಅಭಿವೃದ್ದಿ ತಂಡಗಳು,ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇನ್ನಿತರ ಸಾಮಾಜಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಮುಖಾಂತರ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಅದಲ್ಲದೇ ಈ ಯೋಜನೆಯನ್ನು ತಳ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಕರ್ನಾಟಕದ ಜೈನ್ ಗ್ರುಪ್ ಆಫ್ ಇನ್ಸಿಟಿಟ್ಯೂಟ್ ಮತ್ತು ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಗಳ ಜೊತೆ ಒಪ್ಪಂದ ಮಾಡಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಸಂಜಯ ಪಾಟೀಲ ಅವರು, ಭಾರತೀಯ ಜೈನ ಸಂಘಟನೆಯು ಸಮಾಜದ ಎಲ್ಲ ಸಮುದಾಯಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯಾಗಿದ್ದು, ಸಂಸ್ಥೆಯ ಕಾರ್ಯ ಇದೇ ರೀತಿಯಲ್ಲಿ ಮುಂದುವರೆಯಲಿ ಎಂದು ಅವರು ಹಾರೈಸಿದರು.
ಸಮಾರಂಭದಲ್ಲಿ ಭಾರತೀಯ ಜೈನ ಸಂಘಟನೆಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಮಹಾವೀರಚಂದ ಪಾರೇಖ ಅವರು ಮಾತನಾಡಿ,ಇಂದು ಸಂಸ್ಥೆಯ ಜೊತೆಯಲ್ಲಿ ಯುವಕರು ಸಹ ಕೈಜೋಡಿಸಿದ್ದು, ಇದರಿಂದ ಸಂಸ್ಥೆಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಭಾರತೀಯ ಜೈನ ಸಂಘಟನೆಯ ರಾಷ್ಟಿçÃಯ ಅಧ್ಯಕ್ಷ ರಾಜೇಂದ್ರ ಲುಂಕರ ಅವರು ಮಾತನಾಡಿ, ಶಾಂತಿಲಾಲ ಮುಥ್ಥಾ ಅವರ ದೂರದೃಷ್ಟಿಯಿಂದ ಇಂದು ಸಂಸ್ಥೆಯು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ. ರಾಷ್ಟಿçÃಯ ಆಪತ್ತುಗಳು ಎದುರಾದಾಗ ಭಾರತೀಯ ಜೈನ ಸಂಘಟನೆಯು ಮುಂಚೂಣೀಯಲ್ಲಿ ಇಂತು ಸಹಾಯಕ್ಕೆ ಮುಂದಾಗುತ್ತದೆ. ಇದರಿಂದ ಈ ಸಂಸ್ಥೆಯ ಕಾರ್ಯ ಇನ್ನಿತರ ಸಂಸ್ಥೆಗಳಿಗೂ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಅವರು ತಿಳಿಸಿದರು.
ಸಮಾರಂಭದ ವೇದಿಕೆ ಮೇಲೆ ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗೆನ್ನವರ, ಭಾರತೀಯ ಜೈನ ಸಂಘಟನೆಯ ರಾಷ್ಟಿçÃಯ ಕಾರ್ಯದರ್ಶಿ ಗೌತಮ ಭಾಪನಾ, ಬೆಳಗಾವಿ ವಿಭಾಗದ ಕಾರ್ಯದರ್ಶಿ ಶ್ರೀಪಾಲ ಖೇಮಲಾಪುರೆ, ಬೆಳಗಾವಿ ಘಟಕದ ಅಧ್ಯಕ್ಷ ಹೀರಾಚಂದ ಕಲಮನಿ,ಅಭಿಯಾನ ಯೋಜನಾ ಮುಖ್ಯಸ್ಥ ದಿನೇಶ ಪಾಲರೇಚಾ , ಹಾಗೂ ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜೀವ ದೊಡ್ಡಣ್ಣವರ ಮೊದಲಾಧವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬೆಳಗಾವಿ ವಿಭಾಗದ ಅಧ್ಯಕ್ಷ ವಿನೋದ ದೊಡ್ಡಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ಮಿಥುನ ಶಾಸ್ತ್ರಿ ಮತ್ತು ಸ್ವಾತಿ ಜೋಗ ಕಾರ್ಯಕ್ರಮ ನಿರೂಪಿಸಿದರು. ಅರುಣ ಯಲಗುದ್ರಿ ವಂದಿಸಿದರು. ಇದೇ ಸಂದರ್ಭದಲ್ಲಿ ಕೋವಿಡ ಮುಕ್ತ ಗ್ರಾಮ ಅಭಿಯಾನ ಅನುಷ್ಠಾನಕ್ಕೆ ಸಂಭದಿಸಿದಂತೆ ಭಾರತೀಯ ಜೈನ ಸಂಘಟನೆ ಮತ್ತು ಭರತೇಶ ಶೀಕ್ಷಣ ಸಂಸ್ಥೆಗಳ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಶಾಲಾ ಮಕ್ಕಳಿಗೆ ಕಲಿಕೆ ಹಾಗೂ ಆಟಿಕೆ ಪರಿಕರಗಳ ವಿತರಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ