ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪ್ರಾದೇಶಿಕ ಆಯುಕ್ತರು ಹಾಗೂ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಬಿಮ್ಸ್) ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಅಧಿಕಾರಿಗಳಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಮನವಿಯ ಮೇರೆಗೆ ಜಿಲ್ಲೆಯ ವಿವಿಧ ಉದ್ಯಮಿಗಳು ಬಿಮ್ಸ್ ಅಭಿವೃದ್ಧಿಗೆ ಉದಾರ ನೆರವು ನೀಡಿದ್ದಾರೆ.
ಬಿಮ್ಸ್ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ಕಾಗಿ ಗುರುವಾರ (ಜುಲೈ.8) ವಿವಿಧ ಉದ್ಯಮಿಗಳು ಒಟ್ಟಾರೆ ರೂ .11.46 ಲಕ್ಷ ಕೊಡುಗೆಯನ್ನು ನೀಡಿದರು.
Srinivas Induction Hardening, Belagavi
1,00,000
Shanti Foumac Pvt.Ltd. 2,00,000
Belgaum Aqua Valves Pvt.Ltd. 25,000
Kwality Animal Feeds Pvt.Ltd. 50,000
Millennium Starch India Pvt.Ltd. 50,000
Hydropack India Pvt.Ltd. 25,000
Expert Valve & Equipment Pvt.Ltd. 10,000
Hindalco Industries Ltd. 1,00,000
AKP Ferrocast Pvt.Ltd. 1,00,000
AKP Foundries Pvt.Ltd. 50,000
Servo Controls & Hydraulics Pvt.Ltd. 25,000
REC Flow Technologies LLP. 50,000
Hyloc Hydrotechnic Pvt.Ltd.1,50,000
AEP Products Pvt.Ltd.10,000
Belagavi District Automobile Delears Association, 95,000
Belgaum District Quarry Owners Association. 1,06,000
ಒಟ್ಟು 11,46,000 ಲಕ್ಷ ಸ್ವೀಕರಿಸಲಾಯಿತು.
ಕೊಡುಗೆ ಸ್ವೀಕರಿಸಿದ ಮಾತನಾಡಿದ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು, ಬಿಮ್ಸ್ ಅಭಿವೃದ್ಧಿಗೆ ಉದ್ಯಮಿಗಳು ಕಳಕಳಿಯಿಂದ ಕೊಡುಗೆ ನೀಡಿರುವುದು ಪ್ರಶಂಶನೀಯ. ಈ ಹಣವನ್ನು ಬಿಮ್ಸ್ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಲಾಗುವುದು ಎಂದು ಹೇಳಿದರು.
ವೈದ್ಯಕೀಯ ಸಂಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಉದ್ಯಮಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಬಿಮ್ಸ್ ಸಂಸ್ಥೆಯ ಪ್ರಭಾರ ನಿರ್ದೆಶಕರಾದ ಡಾ. ಉಮೇಶ ಕೆ. ಕುಲಕರ್ಣಿ ಹಾಗೂ ಮುಖ್ಯ ಆಡಳಿತಾಧಿಕಾರಿಗಳು ಎಸ್.ಎಸ್, ಬಳ್ಳಾರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.
ಚಿಕ್ಕೋಡಿಯಲ್ಲಿ ಇಂದು ನಾಲ್ವರ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ