ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲಾ ಔಷಧಿ ಉಗ್ರಾಣದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ RLS ಐವಿ ಗ್ಲುಕೋಸ್ ನ ಹಲವು ಬಾಕ್ಸ್ ಗಳು ಪತ್ತೆಯಾಗಿವೆ.
ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿಗೆ RLS ಐವಿ ಗ್ಲುಕೋಸ್ ಕಾರಣ ಎಂದು ತಜ್ಞರ ವರದಿ ಬೆನ್ನಲ್ಲೇ ಆರೋಗ್ಯ ಇಲಾಖೆ RLS ಐವಿ ಗ್ಲುಕೋಸ್ ನಿಷೇಧಿಸಿದೆ. ಎಲ್ಲಾ ಆಸ್ಪತ್ರೆಗಳಿಗೂ ಈ ಗ್ಲುಕೋಸ್ ಬಳಕೆ ಮಾಡದಂತೆ ಆದೇಶ ನೀಡಲಾಗಿದೆ. ಇದರ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್ ಆವರಣದಲ್ಲಿರುವ ಜಿಲ್ಲಾ ಔಷಧಿ ಉಗ್ರಾಣದ ಮೇಲೆ ದಾಳಿ ನಡೆಸಿದ್ದಾರೆ.
ಬೆಳಗಾವಿ ಲೋಕಾಯುಕ್ತ ಎಸ್ ಪಿ ಹನುಮಂತರಾಯ ನೇತೃತ್ವದ 8 ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಉಗ್ರಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ RLS ಐವಿ ಗ್ಲುಕೋಸ್ ನ 10ಕ್ಕೂ ಹೆಚ್ಚು ಬಾಕ್ಸ್ ಗಳು ಪತ್ತೆಯಾಗಿವೆ. ಇನ್ನೂ ಹಲವು ಅವಧಿ ಮೀರಿದ ಔಷಧಗಳ ಬಾಕ್ಸ್ ಕಂಡುಬಂದಿದೆ ಎನ್ನಲಾಗಿದೆ. ಅಧಿಕಾರಿಗಳು ಔಷಧ ಉಗ್ರಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ