Latest

*ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಗರ್ಭಿಣಿಯರಲ್ಲಿ ಇಲಿಜ್ವರ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ಬೆನ್ನಲೇ ಎಚ್ಚೆತ್ತ ರಾಜ್ಯ ಸರ್ಕಾರ ತನಿಖೆಗೆ ತಜ್ಞರ ತಂದ ರಚಿಸಿತ್ತು. ತನಿಖಾ ವರದಿಯಲ್ಲಿ ಸಿಜೇರಿಯನ್ ವೇಳೆ ನಿಡುವ ಐವಿ ಧ್ರಾವಣ ದೋಷವೇ ಬಾಣಂತಿಯರ ಸಾವಿಗೆ ಕಾರಣ ಎಂದು ತಿಳಿದುಬಂದಿತ್ತು. ಈ ಘಟನೆ ಬಳಿಕ ಇದೀಗ ಆಸ್ಪತೆಯಲ್ಲಿ ದಾಖಲಾಗಿದ್ದ ಮೂವರು ಗರ್ಭಿಣಿಯರಲ್ಲಿ ಇಲಿ ಜ್ವರ ಕೂಡ ಪತ್ತೆಯಾಗಿದೆ.

ನವೆಂಬರ್ 9ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 7 ಗರ್ಭಿಣಿಯರಲ್ಲಿ ಹೆರಿಗೆ ಬಳಿಕ ನಾಲ್ವರು ಸಾವನ್ನಪ್ಪಿದ್ದರು. ಅವರಲ್ಲಿ ಮೂವರಲ್ಲಿ ಇಲಿಜ್ವರ ಪತ್ತೆಯಾಗಿದೆ.

ಮೂವರ್ ಪೈಕಿ ಇಬ್ಬರು ಹೆರಿಗೆಯಾಗಿ ಇಲಿಜ್ವರದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಓರ್ವ ಬಾಣಂತಿಗೆ ಆಸ್ಪತ್ರೆಯಲ್ಲಿಯೇ ಚಿಕಿಇತ್ಸೆ ಮುಂದುವರೆದಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ಗಂಗಾಧರ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button