Kannada NewsLatest

ವಿಶ್ವ ಹಿಂದೂ ಪರಿಷತ್ ಬಜರಂಗದಳವತಿಯಿಂದ ರಕ್ತದಾನ ಶಿಬಿರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವ ಹಿಂದೂ ಪರಿಷತ್ ಬಜರಂಗದಳದ ಬೆಳಗಾವಿ ವತಿಯಿಂದ ಸಂತಮೀರಾ ಹೈಸ್ಕೂಲನಲ್ಲಿ ರಕ್ತ ದಾನ ಶಿಬಿರ ಆಯೋಜನೆ ಮಾಡಲಾಗಿತ್ತು.

ಕೊರೊನಾ ಲಸಿಕೆ ಪಡೆದ 3 ತಿಂಗಳ ಕಾಲ ರಕ್ತ ಕೊಡಲು ಸಾಧ್ಯವಿಲ್ಲದ ಕಾರಣ ಜನರ ಜೀವ ರಕ್ಷಣೆಗಾಗಿ ಮುಂಜಾಗೃತಾ ಕ್ರಮವಾಗಿ ಬಜರಂಗದಳದ ಯುವಕರು ರಕ್ತದಾನ ಮಾಡಿ ಗಮನ ಸೆಳೆದರು.

ಕೇವಲ ಯುವಕರು ಮಾತ್ರವಲ್ಲ ಮಹಿಳೆಯರು ಕೂಡ ಸ್ವಯಂ ಪ್ರೇರಣೆಯಿಂದ ರಕ್ತ ದಾನ ಶಿಬಿರದಲ್ಲಿ ಪಾಲ್ಗೊಂಡು ಎಲ್ಲರಿಗೂ ಪ್ರೇರಣೆಯಾದರು. ಸಮಯ ಮುಗಿದ ಕಾರಣ 93 ಜನರಿಗಷ್ಟೇ ರಕ್ತ ದಾನ ಮಾಡಲು ಸಾಧ್ಯವಾಯಿತು.

ಇದೇ ರೀತಿ ಈಗಾಗಲೇ ಕಿತ್ತೂರು, ತಿಗಡಿ, ರಾಮದುರ್ಗ, ಖಾನಾಪುರ ಬೀಡಿ ಮುಂತಾದ ಕಡೆ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ವಿಶ್ವ ಹಿಂದು ಪರಿಷತ್ ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಕದಮ್,ಡಾ ಭಾಗೋಜೀ,ಕ್ರಷ್ಣ ಭಟ್ ವಿಜಯ ಜಾದವ,ಹೇಮಂತ ಹವಳ,ಬಜರಂಗದಳದ ಜಿಲ್ಲಾ ಸಂಯೋಜಕ ಬಾವಕಣ್ಣ ಲೋಹಾರ, ನಗರ ಸಂಯೋಜಕ ಆದಿನಾಥ ಗಾವಡೆ ಉಪಸ್ಥಿತರಿದ್ದರು.
ಗೋಕಾಕ ಕೊವಿಡ್ ಸೋಂಕಿತರಿಗಾಗಿ ಆಕ್ಸಿಜನ್ ಪ್ಲಾಂಟ್ – ಬಾಲಚಂದ್ರ ಜಾರಕಿಹೊಳಿ

Home add -Advt

Related Articles

Back to top button