Latest

3 ಪುಸ್ತಕಗಳ ಲೋಕಾರ್ಪಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ದ್ವಿತೀಯ ಪುಣ್ಯಸ್ಮರಣೆ ನಿಮಿತ್ತ ಹಾಗೂ ಸಾಹಿತಿ ಪ್ರಕಾಶ ಗಿರಿಮಲ್ಲನವರ ಅವರ ಗ್ರಹ ಪ್ರವೇಶ ನಿಮಿತ್ತ 3 ಪುಸ್ತಕಗಳ ಲೋಕಾರ್ಪಣೆ ನಡೆಯಿತು.

ವೈಭವ ನಗರದಲ್ಲಿ ಇಂದು ಡಾ. ಸರಜೂ ಕಾಟ್ಕರ್ ಬರೆದ “ಬಂಡಾಯ ಜಗದ್ಗುರು ಜೊತೆಗೆ ಮಾತುಕತೆ”, ಡಾ. ಬಸವರಾಜ ಜಗಜಂಪಿ ಬರೆದ “ಭಾವೈಕ್ಯ ಮೇರು”, ಡಾ. ಸುರೇಶ ಹನಗಂಡಿ ಅವರು ಬರೆದ ” ಬಯಲಬೆಳಕು”  ಪುಸ್ತಕಗಳನ್ನು ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿದರು.

ಈ ವೇಳೆ ಚಿಂಚನಿಯ ಶ್ರೀ ಅಲ್ಲಮ ಪ್ರಭು ಮಹಾಸ್ವಾಮಿಗಳು, ಕಿತ್ತೂರು ಕಲ್ಮಠದ ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು, ನಾಗನೂರು ರುದ್ರಾಕ್ಷಿ ಮಠದ ಅಲ್ಲಮ ಪ್ರಭು ಮಹಾಸ್ವಾಮಿಗಳು, ಕಡೋಲಿಯ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು ಬಸವರಾಜ ಜಗಜಂಪಿ,ಚಂದ್ರಶೇಖರ ವಸ್ತ್ರದ, ಪ್ರಕಾಶ ಗಿರಿಮಲ್ಲನವರ, ಬಸವರಾಜ ಹಳಿಂಗಲಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button