
ಬಿಜೆಪಿಯ ಕಿರುಕುಳಕ್ಕೆ ಬಗ್ಗದ ಸತೀಶ್ ಜಾರಕಿಹೊಳಿಗೆ ಮತ ನೀಡಿ
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಶ್ಲಾಘಿಸಿದ ಡಿ.ಕೆ.ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಜೆಪಿ ನಾಯಕರ ಆಮಿಷಗಳಿಗೆ, ಕಿರುಕುಳಗಳಿಗೆ ಜಗ್ಗದೇ ಎಲ್ಲವನ್ನು ನಿಭಾಯಿಸುತ್ತಿರುವ ಬಡವರ, ಯುಕರ ಧ್ವನಿಯಾಗಿ ಕೆಲಸ ಮಾಡಲು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ಅಮೂಲ್ಯ ಮತಗಳನ್ನು ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದರು.
ಸುಳೇಭಾವಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಿಂದ 6 ಜನರನ್ನು ಆಯ್ಕೆ ಮಾಡಿದ್ದೀರಿ. ದನಕರುಗಳ ವ್ಯಾಪಾರ ಆದ ಹಾಗೇ ಮೂರು ಶಾಸಕರನ್ನು ಬಿಜೆಪಿಯವರು ಖರೀದಿಸಿದರು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೂಡ ಅವರು ಲೆಕ್ಕಕ್ಕೆ ಇಟ್ಟುಕೊಂಡಿದ್ದರು. ಮಾಧ್ಯಮಗಳಲ್ಲಿಯೂ ಬಂದಿತ್ತು. ಈ ಬಗ್ಗೆ ನಾನು ಲಕ್ಷ್ಮೀ ಅವರನ್ನು ಕೇಳಿದೆ. ಬಿಜೆಪಿ ಆಹ್ವಾನಿಸಿದ್ದು ನಿಜ. ಮಂತ್ರಿಸ್ಥಾನ ನೀಡುವುದಾಗಿ ಹೇಳಿದ್ದೂ ನಿಜ. ಆದರೆ ಕ್ಷೇತ್ರದ ಜನ ನನ್ನ ಮೇಲೆ ನಂಬಿಕೆ ಇಟ್ಟು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ನನ್ನ ಗೆಲ್ಲಿಸಿದ್ದಾರೆ. ನನ್ನ ಮತದಾರರಿಗೆ ಪಕ್ಷಕ್ಕೆ ಮೋಸ ಮಾಡಬಾರದೆಂದು ಬಿಜೆಪಿ ಆಮಿಷಕ್ಕೆ ಬಲಿಯಾಗಿಲ್ಲ ಎಂದರು.
ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿಗೆ ಹಲವು ರೀತಿಯ ಆಮಿಷ, ಕಿರುಕುಳ ನೀಡಿದ್ದಾರೆ. ಆದರೆ ಯಾವುದಕ್ಕೂ ಜಗ್ಗಿಲ್ಲ. ಸತೀಶ್ ಜಾರಕಿಹೊಳಿ ಮುಂದಿನ ದಿನಗಳಲ್ಲಿ ಕೂಡ ಎಲ್ಲವನ್ನು ನಿಭಾಯಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಕೊಟ್ಟ ಭರವಸೆ ಉದ್ಯೋಗ ಸೃಷ್ಟಿ, ಖಾತೆಗೆ ಹಣ ಹಂಚಿಕೆ, ಆನಂತರದ ನೋಟ್ ಬ್ಯಾನ್ ಇದೆಲ್ಲ ಸಾಧನೆಗಳ ಬಗ್ಗೆ ಮುಂದೆ ಮಾತನೋಡೋಣ ಪ್ರಮುಖವಾಗಿ ಕಳೆದ ಒಂದು ವರ್ಷದಿಂದ ದೇಶಕ್ಕೆ ಕೊರೊನಾ ಸೋಂಕು ಹರಡಿತು. ಪ್ರಧಾನಿ ಮೋದಿ ಅವರು ಮಹಾಭಾರತದ ಯುದ್ಧ 18 ದಿನಗಳ ಕಾಲ ನಡೆಯಿತು. ಅದರಂತೆ ನಾನು 21 ದಿನಗಳಲ್ಲಿ ಕೊರೊನಾ ಯುದ್ಧ ಮುಗಿಸುತ್ತೇನೆ ನೀವು ದೀಪ ಬೆಳಗಿ ಚಪ್ಪಾಳೆ ತಟ್ಟಿ ಎಂದರು. ದೇಶದ ಜನನರು ದೀಪವನ್ನು ಬೆಳಗಿ ಚಾಪ್ಪಾಳೆ ತಟ್ಟಿದರು. ಆದರೆ ಏನಾಯಿತು? ಬಡವರಿಗೆ ಕಷ್ಟಕಾಲದಲ್ಲಿ, ರೈತರಿಗೆ, ಕಾರ್ಮಿಕರಿಗೆ ಚಾಲಕರಿಗೆ, ನೇಕಾರರಿಗೆ ಯಾರೊಬ್ಬರ ರಕ್ಷಣೆಗೂ ಸರ್ಕಾರ ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರಾದ ನಾನು, ಸಿದ್ದರಾಮಯ್ಯ ಎಲ್ಲರೂ ಸಿಎಂ ಯಡಿಯೂರಪ್ಪನವರ ಬಳಿ ಹೋಗಿ, ಕಷ್ಟದಿಂದ ಊಟಕ್ಕಾಗಿ ಪರದಾಡುತ್ತಿದ್ದಾರೆ. ಒಂದು ತಿಂಗಳು 10 ಸಾವಿರವನ್ನಾದರೂ ನೀಡಿ ಎಂದು ಕೇಳಿದೆವು. ಕೊನೆಗೆ 5 ಸಾವಿರ ರೂ ಘೋಷಿಸಿದರು. ಆದರೆ ಯಾರಿಗಾದರೂ ಹಣ ಬಂತಾ? ಯಾರೊಬ್ಬರಿಗೂ ನಯಾಪೈಸೆ ಸಿಗಲಿಲ್ಲ. 20 ಲಕ್ಷ ಕೋಟಿ ಕೊಡುತ್ತಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಯಾವುದೂ ಬರಲಿಲ್ಲ. ಕಷ್ಟಕಾಲದಲ್ಲಿ ಯಾರೊಬ್ಬರ ಸಹಾಯಕ್ಕು ಬಾರದ ಬಿಜೆಪಿ ಸರ್ಕಾರ ನಮಗೆ ಬೇಕಾ? ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ, ಜನರ ಕಷ್ಟಗಳಗೆ ಸ್ಪಂದನೆ ಇಲ್ಲ, ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕಿದೆ. ಬಡವರ, ರೈತರ, ಯುವಕರ ದ್ವನಿಯಾಗಿ ಸತೀಶ್ ಜಾರಕಿಹೊಳಿ ಅವರನ್ನು ಉಪಚುನಾವಣೆಯಲ್ಲಿ ಆಯ್ಕೆ ಮಾಡುವಮೂಲಕ ಬದಲಾವಣೆಗೆ ನಾಂದಿ ಹಾಡಬೇಕಿದೆ ಎಂದು ಕರೆ ನೀಡಿದರು.
ಸುಳೇಭಾವಿಯ ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಿಯ ಗದ್ದುಗೆಯ ಸ್ಥಳದಲ್ಲಿ ಸತೀಶ್ ಜಾರಕಿಹೊಳಿ ಪರ ಪಕ್ಷದ ಬೃಹತ್ ಶಕ್ತಿ ಪ್ರದರ್ಶನ





ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ