ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಹೊಸ ನಿಯಮಾವಳಿ ಪ್ರಕಾರ ಮತದಾರರ ಪಟ್ಟಿಯಲ್ಲಿರುವ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಕಲಚೇತನ ಮತದಾರರಿಗೆ ಅಂಚೆ ಮತ ಪತ್ರದ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಈಗಾಗಲೇ ಫಾರ್ಮ್ 12 ಡಿ ನಮೂನೆಯನ್ನು ವಿತರಿಸಲು ಪ್ರಾರಂಭಿಸಲಾಗಿದೆ. ಸಂಬಂಧಿಸಿದ ಮತದಾರರು ನಮೂನೆಯನ್ನು ಭರ್ತಿಮಾಡಿ ಮಾರ್ಚ್ 27 ಸಂಜೆ 7 ಗಂಟೆಯೊಳಗಾಗಿ ಸಂಬಂಧಪಟ್ಟ ಬಿ.ಎಲ್.ಒ ಹಾಗೂ ಗ್ರಾಮಲೆಕ್ಕಾಧಿಕಾರಿಗಳಿಗೆ ಸಲ್ಲಿಸಬಹುದು.
ಅವಧಿ ಮುಗಿದ ನಂತರ ಬಂದ ನಮೂನೆಗಳನ್ನು ಪರಿಗಣ ಸಲಾಗುವುದಿಲ್ಲ. ನಿಗದಿತ ಅವಧಿಯಲ್ಲಿ ಸ್ವೀಕೃತವಾದ ನಮೂನೆಗಳನ್ನು ಪರಿಶೀಲಿಸಿ, ಅರ್ಹ ಮತದಾರರಿಗೆ ಅಂಚೆ ಮತಪತ್ರಗಳನ್ನು ತಲುಪಿಸಲಾಗುವುದು. ಚುನಾವಣೆ ನಡೆಯಲಿರುವ ಒಂದು ದಿನ ಮೊದಲು ಎಪ್ರಿಲ್ 16 ರಂದು ಸಂಜೆ 7 ಘಂಟೆ ಒಳಗಾಗಿ ಮತದಾನ ಸಿಬ್ಬಂದಿ ತಂಡಗಳ ಮೂಲಕ ಮತ ಚಲಾಯಿಸಲಾದ ಅಂಚೆ ಮತಪತ್ರದ ಮುಚ್ಚಿದ ಲಕೋಟೆಯನ್ನು ಸಂಗ್ರಹಿಸಲಾಗುವುದು.
ಸದರಿ ಮತದಾನ ಸೌಲಭ್ಯವನ್ನು ಪಡೆದುಕೊಳ್ಳಲು ಬೆಳಗಾವಿಯ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಾದ ಶಿವನಗೌಡ.ಎಸ್.ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ