
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚಾರಣೆಯಲ್ಲಿ ಮಾದಕ ವಸ್ತು ಮಾರಾಟಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದು, 1,20,೦೦೦ ಮೌಲ್ಯದ ಪೆನ್ನಿಯನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು 32 ವರ್ಷದ ಸಂಜಯ ಪರಶುರಾಮ ಎಂದು ಗುರುತಿಸಲಾಗಿದೆ. ಈತ ಬೆಳಗಾವಿಯ ಸಮರ್ಥನಗರದ ನಿವಾಸಿಯಾಗಿದ್ದಾನೆ.
ಆರೋಪಿ ಸಮರ್ಥನಗರದ ಬಳಿ ನಿಷೇಧಿತ ಪೆನ್ನಿ ಎಂಬ ಮಾಧಕ ವಸ್ತಿವನ್ನು ಮಾರಾಟ ಮಾಡುತ್ತಿದ್ದ. ಈತನಿಂದ 300 ಬಿಳಿಹಾಳೆಯ ಚೀಟಿಗಳಲ್ಲಿದ್ದ 1,20,000 ಮೌಲ್ಯದ 24.00 ಗ್ರಾಂ ಪೆನ್ನಿ ವಶಕ್ಕೆ ಪಡೆಯಲಾಗಿದೆ.
ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಪಿಐ ಅಲ್ತಾಫ್ ಎಂ ಹಾಗೂ ತಂಡದ ಕಾರ್ಯಾಚಾರಣೆಯನ್ನು ಮೇಲಾಧಿಕಾರಿಗಳು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ