ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಣಕ್ಕೊಂದು ಟ್ವಿಸ್ಟ್ ಸಿಗುತ್ತ್ತಿದ್ದು, ಬೆಳಗಾವಿಯಲ್ಲಿ ಯುವತಿ ಪೋಷಕರು ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ನಮ್ಮ ಮಗಳು ಒತ್ತಡದಲ್ಲಿದ್ದಾಳೆ. ಡಿ.ಕೆ.ಶಿವಕುಮಾರ್ ಹಾಗೂ ಸಿಡಿ ಗ್ಯಾಂಗ್ ಒತ್ತಡಕ್ಕೆ ಮಣಿದು ಹೇಳಿಕೆಗಳನ್ನು ನೀಡುತ್ತಿದ್ದಾಳೆ. ಹಾಗಾಗಿ ಆಕೆ ಹೇಳಿಕೆಗಳನ್ನು ಸಧ್ಯಕ್ಕೆ ಪರಿಗಣಿಸಬಾರದು ಎಂದು ಹೇಳಿದ್ದಾರೆ.
ಯುವತಿ ತಂದೆ ಮಾತನಾಡಿ, ನಮ್ಮ ಪುತ್ರಿ ನಮಗೆ ಬೇಕು. ಆಕೆಗೆ ಯಾವರೀತಿ ಚಿತ್ರಹಿಂಸೆ ನೀಡುತ್ತಿದ್ದಾರೋ ಗೊತ್ತಿಲ್ಲ. ನನ್ನ ಪುತ್ರಿಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಮೊದಲು ನಮ್ಮ ಮಗಳನ್ನು ನಮ್ಮ ಬಳಿ ಕಳುಹಿಸಿಕೊಡಿ. ಆಕೆಯ ಮೇಲೆ ಡಿ.ಕೆ.ಶಿವಕುಮಾರ್ ಕಡೆಯವರು ಒತ್ತಡ ಹೇರಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಮೊದಲು ಅವಳು ಒತ್ತಡದಿಂದ ಹೊರಬರಬೇಕು. ಬಳಿಕ ಹೇಳಿಕೆಗಳನ್ನು ನೀಡಲಿ ಎಂದರು.
ಇನ್ನು ನಾವು ಯಾರ ಒತ್ತಡಕ್ಕೂ ಒಳಗಾಗಿಲ್ಲ. ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಆದರೆ ನಮ್ಮ ಮಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇತಹ ಸ್ಥಿತಿಯಲ್ಲಿ ಆಕೆ ಬಂದು ಹೇಳಿಕೆ ನೀಡಿದರೆ ಅದನ್ನು ಪರಿಗಣಿಸಬಾರದು. ಆಕೆಯನ್ನು ಮೊದಲು ನಮಗೆ ಒಪ್ಪಿಸಿ ನಾಲ್ಕು ದಿನಗಳ ಕಾಲ ಆಕೆಯನ್ನು ನಮ್ಮ ಬಳಿಗೆ ಬಿಡಿ. ಆಕೆ ಸ್ವಲ್ಪ ನಿರಾಳವಾಗಿರಲಿ. ಬಳಿಕ ಆಕೆ ನೀಡುವ ಹೇಳಿಕೆಗಳನ್ನು ಪಡೆದುಕೊಳ್ಳಿ ಎಂದು ಹೇಳಿದ್ದಾರೆ
ನಾನು ಮಾಜಿ ಸೈನಿಕನಿರುವುದರಿಂದ ನನ್ನ ಮಗಳ ರಕ್ಷಣೆಗೆ ನಾನು ಬದ್ಧ. ಅವಳು ನಮ್ಮ ಜೊತೆ ಇರಲು ಒಪ್ಪುವುದಾದರೆ ನಮ್ಮ ಬಳಿ ಬರಲಿ. ಒಂದು ವೇಳೆ ಆಕೆ ನಮ್ಮ ಜೊತೆ ಇರಲು ಒಪ್ಪದಿದ್ದರೆ ಅದನ್ನು ನ್ಯಾಯಾಲಯದ ಮುಂದೆ ಹೇಳಲಿ. ನ್ಯಾಯಾಧೀಶರೇ ನಿರ್ಧರಿಸಲಿ. ಆದರೆ ಅದೆಲ್ಲಕಿಂತ ಮೊದಲು ಆಕೆಯನ್ನು ನಮ್ಮ ಬಳಿ ಕಳುಹಿಸಿಕೊಡಿ ಎಂದು ಕೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಯುವತಿ ಸಹೋದರ ಮೊದಲು ನನ್ನ ಅಕ್ಕನನ್ನು ನಮ್ಮ ಬಳಿ ಕಲುಹಿಸಿಕೊಡಿ. ಆಕೆಗೆ ಕೌನ್ಸಲಿಂಗ್ ಕೊಡಿಸಬೇಕು. ಆಕೆ ಸ್ವಲ್ಪ ನಿರಾಳವಾದ ಬಳಿಕ ಹೇಳಿಕೆ ನೀಡಲಿ. ಕೋರ್ಟ್ ಮುಂದೆ ಹೇಳಿಕೆ ದಾಖಲಿಸಲಿ. ಆಕೆಗೆ ಡಿಕೆಶಿ ಕಡೆಯವರು ಒತ್ತಡ ಹೇರುತ್ತಿದ್ದಾರೆ. ಅವರು ಹೇಳಿದಂತೆ ಆಕೆ ಕೇಳುತ್ತಿದ್ದಾಳೆ. ಮೊದಲು ಡಿಕೆಶಿ ಹಾಗೂ ಸಿಡಿ ಗ್ಯಾಂಗ್ ನ್ನು ಒಳಗೆಹಾಕಿ ಬಾಯಿಬಿಡಿಸಲಿ ಎಲ್ಲವೂ ಹೊರಬರುತ್ತದೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ