ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜಾಪುರದ ಯುವತಿ ಪೋಷಕರು ಬೆಳಗಾವಿಯಲ್ಲಿ ಏಕಿದ್ದಾರೆ? ಮಗಳ ಹೇಳಿಕೆಗೆ ವಿರುದ್ಧವಾಗಿ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದರೆ ಇದು ಪೋಷಕರು ಆರೋಪಿಯ ಕಸ್ಟಡಿಯಲ್ಲಿರುವುದು ಸ್ಪಷ್ಟಗೊಳಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಯುವತಿ ಪೋಷಕರು ಯಾರ ಗನ್ ಪಾಯಿಂಟ್‌ನಲ್ಲಿದ್ದಾರೆ? ಯಾರದೋ ಬೆದರಿಕೆಯಲ್ಲಿ ಮಾತಾಡುತ್ತಿದ್ದಾರೆ. ಯಾರೋ ಬರೆದುಕೊಟ್ಟ ಸ್ಕ್ರಿಪ್ಟ್‌ನ್ನು ಹೆದರಿಕೆಯಲ್ಲಿ ಓದುತ್ತಿದ್ದಾರೆ. ಮಗಳ ಹೇಳಿಕೆಗೆ ವಿರುದ್ಧವಾಗಿ ಏಕೆ ಮಾತಾಡುತ್ತಿದ್ದಾರೆ. ಇದು ಪೋಷಕರು ಆರೋಪಿಯ ಕಸ್ಟಡಿಯಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದೆ.
ಎಸ್ ಐಟಿ ಆರೋಪಿಯನ್ನು ರಕ್ಷಿಸುತ್ತಿದೆ. ಪೋಷಕರಿಗೆ ಬೆದರಿಕೆಯೊಡ್ಡಿ ಹೇಳಿಕೆ ಕೊಡಿಸಲಾಗುತ್ತಿದೆ. ಪೋಷಕರಿಗೆ ನಡೆದ ವಿಷಯದ ಬಗ್ಗೆ ಗೊತ್ತಿಲ್ಲ. ನನಗೆ ರಕ್ಷಣೆ ಸಿಗುವ ಬಗ್ಗೆ ನಂಬಿಕೆ ಇಲ್ಲ ಎಂದು ಯುವತಿ ಹೇಳಿಕೆಗಳನ್ನು ನೀಡಿದ್ದಾಳೆ. ಕಳೆದ 27 ದಿನಗಳಿಂದ ಸಿಡಿ ಪ್ರಕರಣದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಆರೋಪಿಗೆ ಸಂಪೂರ್ಣ ರಕ್ಷಣೆ ನೀಡುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಕಿಡಿಕಾರಿದೆ.
ಸರ್ಕಾರ ರಾಜ್ಯದ ಜನರ ಋಣದಲ್ಲಿದೆಯೋ? ಅತ್ಯಾಚಾರ ಆರೋಪಿ ಋಣದಲ್ಲಿದೆಯೋ? ಫ್ರೇಮ್ ವರ್ಕ್ ಇಲ್ಲದಿರೋ ಎಸ್ ಐಟಿ ರಚನೆ ಸಂತ್ರಸ್ತೆಗೆ ನ್ಯಾಯ ಒದಗಿಸುವುದಕ್ಕೋ ಅಥವಾ ಅತ್ಯಾಚಾರಿ ರಕ್ಷಣೆಗೋ? ಸರ್ಕಾರದ ಮೇಲೆ ನಂಬಿಕೆ ಇಲ್ಲದೆ ಸಂತ್ರಸ್ತ ಯುವತಿ ರಾಜ್ಯ ಹೈಕೋರ್ಟ್ ಮುಖ್ಯನ್ಯಾಧೀಶರ ಮೊರೆ ಹೋಗಿದ್ದು, ಎಸ್ ಐಟಿ ಕಾರ್ಯ ಧಕ್ಷತೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ತನಿಖಾ ತಂಡ ಪೊಲೀಸ್ ಇಲಾಖೆ ಘನತೆ ಕಾಪಾಡಲು ಹೊರಟಿದೆಯೇ ಅಥವಾ ಅತ್ಯಾಚಾರಿ ಆರೋಪಿ ರಕ್ಷಣೆಗೆ ನಿಂತಿದೆಯೇ?ಈ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆ ರಾಜ್ಯ ಸರ್ಕಾರಕ್ಕಿದೆಯೇ? ಎಂದು ಪ್ರಶ್ನಿಸಿದೆ.
ಸಿಡಿ ಲೇಡಿ ಪೋಷಕರ ದಿಢೀರ್ ಸುದ್ದಿಗೋಷ್ಠಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ