*ಚೆಕ್ ಪೋಸ್ಟ್ ಗಳಿಗೆ ಜಿಲ್ಲಾ ಚುನಾವಣಾ ವೆಚ್ಚ ನೋಡಲ್ ಅಧಿಕಾರಿ ಭೇಟಿ: ವಾಹನಗಳ ತಪಾಸಣೆ ತೀವ್ರಗೊಳಿಸಲು ನಿರ್ದೇಶನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲಾ ವೆಚ್ಚ ವೀಕ್ಷಣಾ ನೋಡಲ್ ಅಧಿಕಾರಿ ಪರಶುರಾಮ ದುಡಗುಂಟಿ ಇಂದು ಬೆಳಗಾವಿ ಉತ್ತರ ಕ್ಷೇತ್ರ ಹಾಗೂ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ, ಅರಳಿಕಟ್ಟಿ, ಹತ್ತರಗಿ ಹಾಗೂ ಬಾಚಿ ಅಂತರರಾಜ್ಯ ಚೆಕ್ ಪೋಸ್ಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮತದಾನಕ್ಕೆ ಇನ್ನೇನು ನಾಲ್ಕು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ವಾಹನಗಳ ತಪಾಸಣೆ ತೀವ್ರಗೊಳಿಸುವಂತೆ ಚೆಕ್ ಪೋಸ್ಟ ಸಿಬ್ಬಂದಿಗಳಿಗೆ ನಿರ್ದೇಶಿಸಿದರು.
ತಪಾಸಣೆ ಪರಿಣಾಮಕಾರಿ ಆಗಲು ಹೆಚ್ಚುವರಿ ತಪಾಸಣಾ ಅಧಿಕಾರಿಗಳು ಮತ್ತು ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಪಿ. ಬಿ. ದುಡಗುಂಟಿ ತಿಳಿಸಿದರು.
ಮತದಾನ ದಿನ ಹತ್ತಿರವಾಗುತ್ತಿದ್ದಂತೆ ಅಕ್ರಮ ಹಣ ಹಾಗೂ ವಸ್ತುಗಳ ಸಾಗಾಣಿಕೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಸ್ಸು, ಕಾರು, ಜೊತೆಗೆ ಬೈಕ್ ಗಳನ್ನೂ ಸಹ ತಪಾಸಣೆ ಮಾಡಬೇಕು ಎಂದು ಜಿಲ್ಲಾ ವೆಚ್ಚ ನೋಡಲ್ ಅಧಿಕಾರಿ ಚೆಕ್ ಪೋಸ್ಟ್ ಸಿಬ್ಬಂದಿಗೆ ತಿಳಿಸಿದರು.
ಸಹಾಯಕ ವೆಚ್ಚ ವೀಕ್ಷಣಾಧಿಕಾರಿಗಳಾದ ಶೀತಲ ಕುರಣೆ ಮತ್ತು ಮಂಜುನಾಥ ಬೀಳಗಿಕರ, ಅಧಿಕಾರಿಗಳ, ಪೊಲೀಸ್, ಅರೆಸೇನಾ ಪಡೆಗಳ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ