Film & Entertainment

*ನಟಿ ಶಬಾನಾ ಅಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದ್ದು, ಈ ಬಾರಿ ಜೀವಮಾನ ಸಾಧನೆ ಪ್ರಶಸ್ತಿಗೆ ಖ್ಯಾತ ನಟಿ ಶಬಾನಾ ಅಜ್ಮಿ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.

ಜೀವಮಾನ ಸಾಧನೆ ಪ್ರಶಸ್ತಿಗೆ ರಚಿಸಿದ್ದ ಆಯ್ಕೆ ಸಮಿತಿ ಮೂವರು ಸಂಭಾವ್ಯರ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿತ್ತು. ಅಂತಿಮವಾಗಿ ನಟಿ ಶಬಾನಾ ಅಜ್ಮಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾದ ಭಾರತೀಯ ಚಿತ್ರರಂಗದ ಮೇರು ನಟಿ ಶಬಾನಾ ಅಜ್ಮಿ ಅವರಿಗೆ ಅಭಿನಂದನೆಗಳು.

Home add -Advt

70ರ ದಶಕದಲ್ಲಿ ಕನ್ನೇಶ್ವರ ರಾಮ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ ಕನ್ನಡ ಸಿನಿರಸಿಕರ ಹೃದಯಗೆದ್ದ ಶಬಾನಾ ಅವರು ದಕ್ಷಿಣ ಭಾರತದ ಚಿತ್ರಗಳು ಹಾಗೂ ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿ, ಸೈ ಎನಿಸಿಕೊಂಡವರು. ಸುಮಾರು 50 ವರ್ಷಗಳ ಕಾಲ ಅವರ ಸೇವೆಗೆ ಸಂದ ಈ ಗೌರವ ಪ್ರಶಸ್ತಿಯ ಘನತೆಯನ್ನು ಹೆಚ್ಚಿಸಿವೆ ಎಂದು ತಿಳಿಸಿದ್ದಾರೆ.

Related Articles

Back to top button