Latest

ಹುಷಾರ್! ಮತ್ತೆ ವಕ್ಕರಿಸುತ್ತಿದೆ ಹಳೆಯ ಮಾರಿ

ರಾಜ್ಯದಲ್ಲಿ ಹೆಚ್ಚಿದ ಡೆಂಘ್ಯೂ, ಚಿಕುನ್ ಗುನ್ಯ ಪ್ರಕರಣ

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆತಂಕದ ನಡುವೆ ನಿಫಾ ವೈರಸ್ ಆತಂಕ ಕೂಡ ಎದುರಾಗಿದೆ. ಈ ನಡಿವೆ ಡೆಂಘೂ ಹಾಗೂ ಚಿಕುನ್ ಗುನ್ಯ ಪ್ರಕರಣಗಳು ಹೆಚ್ಚಳವಾಗಿತ್ತಿವೆ.

Home add -Advt

ಕೊರೊನಾ ಸೋಂಕು, ಡೆಲ್ಟಾ, ಡೆಲ್ಟಾ ಪ್ಲಸ್ ರೋಗಗಳ ಅಟ್ಟಹಾಸದ ಬೆನ್ನಲ್ಲೇ ನಿಫಾ ಆತಂತ ಎದುರಾಗಿದೆ. ಇದೇ ವೇಳೆ ಡೆಂಘೀ ಕೇಸ್ ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳಲ್ಲಿ ರಾಜ್ಯದಲ್ಲಿ 893 ಜನರಲ್ಲಿ ಡೆಂಘ್ಯೂ ಸೋಂಕು ಪತ್ತೆಯಾಗಿದೆ. ಪ್ರಮುಖವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲಿಯೇ ಅತಿ ಹೆಚ್ಚು ಪ್ರಕರಣ ಪತ್ತೆಯಾಗಿದೆ.

ಬೆಂಗಳೂರಿನಲ್ಲಿ 446 ಡೆಂಘ್ಯೂ ಪ್ರಕರಣಗಳು ವರದಿಯಾಗಿದ್ದು, ಶಿವಮೊಗ್ಗದಲ್ಲಿ 202, ಉಡುಪಿಯಲ್ಲಿ 293, ಕಲಬುರ್ಗಿಯಲ್ಲಿ 280, ದಕ್ಷಿಣ ಕನ್ನಡ 178, ಕೊಪ್ಪಳ 150 ದಾವಣಗೆರೆ 120, ದಕ್ಷಿಣ ಕನ್ನಡ 178, ಕೊಪ್ಪಳ 150, ದಾವಣಗೆರೆ 120, ಬಳ್ಳಾರಿ 113, ಹಾವೇರಿಯಲ್ಲಿ 100 ಡಿಂಘ್ಯೂ ಕೇಸ್ ಗಳು ವರದಿಯಾಗಿವೆ. ರಾಜ್ಯದಲ್ಲಿ ಡೆಂಘ್ಯೂ ಪ್ರಕರಣಗಳ ಸಂಖ್ಯೆ 2,736ಕ್ಕೆ ಏರಿಕೆಯಾಗಿದೆ.

ಇದರ ಮಧ್ಯೆ ಚಿಕುನ್ ಗುನ್ಯ ರೋಗಿಗಳ ಸಂಖ್ಯೆ ಕೂಡ ಏರಿಕೆಯಾಗಿದ್ದು, ಕಲಬುರ್ಗಿಯಲ್ಲಿ 121 ಜನರಲ್ಲಿ ಈ ರೋಗ ಹರಡಿದೆ. ಕೋಲಾರ 106, ಶಿವಮೊಗ್ಗ 93, ತುಮಕೂರು 68, ವಿಜಯಪುರ 66, ಯಾದಗಿರಿ 51, ಬೆಂಗಳೂರಿನಲ್ಲಿ 51 ಚಿಕನ್ ಗುನ್ಯ ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ ಚಿಕುನ್ ಗುನ್ಯ ರೋಗಿಗಳ ಸಂಖ್ಯೆ 918ಕ್ಕೆ ಏರಿಕೆಯಾಗಿದೆ.
ಮನೆ ಮಾರುವ ಅಥವಾ ಬಾಡಿಗೆಗೆ ಕೊಡುವ ಮುನ್ನ ಪೊಲೀಸರ ಈ ಎಚ್ಚರಿಕೆ ಓದಿ

Related Articles

Back to top button